Advertisement
ಅನೇಕ ಉಪಯೋಗಳುಜೇಡಿ ಮಣ್ಣಿನಲ್ಲಿರುವ ಖನಿಜಗಳು ನೀರಿನಲ್ಲಿ ಬೆರೆತು ಹೋಗುವುದರಿಂದ ಬೇಸಿಗೆಯಲ್ಲಿ ಕೂಡ ನೀರು ತಂಪಾಗಿರಲು ಸಹಕರಿಸುತ್ತದೆ. ಇದರಿಂದ ಫ್ರಿಜ್jನ ಬಳಕೆಯನ್ನು ಕಡಿಮೆ ಮಾಡಬಹುದು.
ಮಣ್ಣಿನ ಪಾತ್ರೆಯಲ್ಲಿಟ್ಟ ಆಹಾರ ಬಿಸಿಯಾಗಿ ಮತ್ತು ಉತ್ತಮ ರುಚಿಯನ್ನು ಸಹ ನೀಡುತ್ತದೆ.
ಮೌಕ್ರೊವೇವ್‌ಗಳಿಗಿಂತ ಸುರಕ್ಷಿತವಾಗಿದೆ ಆಹಾರವನ್ನು ಬಿಸಿಮಾಡಲು ಮೈಕ್ರೋವೇವ್ ಬಳಸುವುದರಿಂದ ಅದು ರಾಸಾಯನಿಕ ಬಿಡುಗಡೆ ಮಾಡುವ ಮೂಲಕ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಆದರೆ ಮಣ್ಣಿನ ಪಾತ್ರೆಗಳು ಸಾವಯವವಾಗಿದ್ದು ಮತ್ತು ಮಾನವ ದೇಹಕ್ಕೆ ಸುರಕ್ಷಿತವಾಗಿವೆ. ಅಲ್ಲದೇ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಯಾವುದೇ ಹಾನಿಕಾರಕ ರಸಾಯನಿಕಗಳನ್ನು ಬಿಡುಗಡೆ ಮಾಡುವುದಿಲ್ಲ. ಇತ್ತೀಚಿನ ಪಾತ್ರೆಗಳಲ್ಲಿ ಹಾಲು ಅಥವಾ ಇತರೆ ಆಹಾರ ಪದಾರ್ಥಗಳನ್ನು ಇಟ್ಟಾಗ ಬೇಗನೇ ಹಾಳಾಗುತ್ತವೆ. ಆದರೆ ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಿ ಇಡುವುದರಿಂದ ಆಹಾರ ಬೇಗನೇ ಕೆಡುವುದಿಲ್ಲ ಮತ್ತು ರುಚಿ ಕೂಡ ಹೆಚ್ಚು. ಭಾರತೀಯ ಕರಕುಶಲತೆಯನ್ನು ಉತ್ತೇಜಿಸುತ್ತದೆ
ದೊಡ್ಡ ಮನೆ ಆಲಂಕಾರಿಕ ಬ್ರಾಂಡ್‌ಗಳು ಭಾರತೀಯ ಪಿಂಗಾಣಿಗಳ ಸೌಂದರ್ಯವನ್ನು ಸೆಳೆದಿದ್ದರೂ, ಇತ್ತೀಚೆಗೆ ಸೆರಾಮಿಕ್ ಪಾತ್ರೆಗಳತ್ತ ಜನರ ಹೆಚ್ಚಿನ ಒಲವು ಕಾಣಬಹುದು. ಇದು ಅಗ್ಗದ ಉತ್ಪನ್ನವೂ ಹೌದು.
Related Articles
ಹೌದು ಮನೆಯ ಅಲಂಕಾರಕ್ಕೆ ಹೆಚ್ಚಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವ ಬದಲು ಮಣ್ಣಿನ ಪಾತ್ರೆಗಳನ್ನು ಬಳಸಬಹುದು, ನಮಗೆ ಬೇಕಾದ ರೀತಿಯ ಬಣ್ಣಗಳನ್ನು ಬಳಿದು ಹೂ ಕುಂಡ, ವಾಸ್, ಇನ್ನಿತರ ಮನೆ ಆಲಂಕಾರಿಕ ವಸ್ತುವಾಗಿಯೂ ಬಳಸಬಹುದು ಇದು ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸುವುದಲ್ಲದೇ ಪಕ್ಕಾ ದೇಶಿ ಶೈಲಿಯ ಮೆರುಗು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.
Advertisement
ವಿಜೀತಾ ಅಮೀನ್