Advertisement

Evaluation: ಅವೈಜ್ಞಾನಿಕ ಮೌಲ್ಯಮಾಪನ ಕ್ರಮ ರದ್ದುಪಡಿಸಲು ಆಗ್ರಹ

09:48 PM Mar 30, 2024 | Suhan S |

ಬೆಂಗಳೂರು: ರಾಜ್ಯ ಪಠ್ಯಕ್ರಮದ 5, 8, 9ನೇ ತರಗತಿ ಮೌಲ್ಯಾಂಕನ, ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಮೌಲ್ಯಮಾಪನದಲ್ಲಿ ಅಳವಡಿಸಲಾಗಿರುವ ಅವೈಜ್ಞಾನಿಕ ನಿಯಮಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಅಧ್ಯಕ್ಷರಿಗೆ ಮನವಿ ಮಾಡಿದೆ.

Advertisement

ಶನಿವಾರ ಮಂಡಳಿ ಅಧ್ಯಕ್ಷೆ ಎನ್‌. ಮಂಜುಶ್ರೀ ಅವರನ್ನು ಭೇಟಿ ಮಾಡಿದ ನಿಯೋಗ, ಶಿಕ್ಷಕರು ಅವಮಾನ, ಮಾನಸಿಕ ಹಿಂಸೆ, ಮಾನಸಿಕ ಒತ್ತಡ, ನೋಟಿಸ್‌ ಜಾರಿ ಮಾಡುವುದು, ಅಮಾನತು ಮಾಡುವುದು ಸಹಿತ ಇಲಾಖೆಯಿಂದ ಸೃಷ್ಟಿಯಾಗಿರುವ ಇತರ ಗೊಂದಲಗಳಿಂದ ಜರ್ಜರಿತರಾಗಿದ್ದಾರೆ. ಶಿಕ್ಷಣ ಇಲಾಖೆಯು ಶಿಕ್ಷಕರನ್ನು ಕಾರ್ಮಿಕರಿಗಿಂತಲೂ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ದೂರಿದರು.

ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳಾದ ವೈ.ಎ.ನಾರಾಯಣ ಸ್ವಾಮಿ, ಅ. ದೇವೇಗೌಡ, ಭೋಜೇಗೌಡ, ಎಂ. ಚಿದಾನಂದ, ಹನುಮಂತ ನಿರಾಣಿ, ಸಂಘದ ಕಾರ್ಯಾಧ್ಯಕ್ಷ, ಮಾಜಿ ಎಂಎಲ್‌ಸಿ ಅರುಣ ಶಹಾಪುರ, ಸಂಘಟನಾ ಕಾರ್ಯದರ್ಶಿ ವೃಷಭೇಂದ್ರಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next