Advertisement

ನೇಕಾರರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹ

05:37 PM Aug 17, 2019 | Team Udayavani |

ರಾಮದುರ್ಗ: ಮಲಪ್ರಭಾ ನದಿ ಪ್ರವಾಹದಿಂದ ತಾಲೂಕಿನ ನೇಕಾರರ ಮನೆಗಳು ಹಾಗೂ ಜವಳಿ ಉದ್ಯಮದ ವಸ್ತುಗಳು ಹಾನಿಗೊಳಗಾಗಿದ್ದು, ಅವುಗಳಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ನೇಕಾರರ ವೇದಿಕೆಯ ಪದಾಧಿಕಾರಿಗಳು ತಹಶೀಲ್ದಾರ್‌ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ರಾಮಚಂದ್ರ ಯಾದವಾಡ, ಈ ಮೊದಲು ನೇಕಾಕರರ ಬದುಕಿನ ಬಂಡಿ ಸುಂದರವಾಗಿ ಸಾಗುತ್ತಿತ್ತು. ಆದರೆ ಈಗ ಮಲಪ್ರಭಾ ನದಿ ಪ್ರವಾಹ ಇಲ್ಲಿರುವ ನೇಕಾರರ ಬದುಕನ್ನೇಕೊಚ್ಚಿಕೊಂಡು ಹೋಗಿದೆ. ಬದುಕಿಗೆ ಆಸೆರೆಯಾಗಬಿಕಿದ್ದ ವಿದ್ಯುತ್‌ ಮಗ್ಗಗಳು ನೀರಿನಲ್ಲಿ ಹಾಳಾಗಿವೆ ಎಂದ ಅವರು, ಆರ್ಥಿಕ ಸಂಕಷ್ಟದಲ್ಲಿರುವ ನೇಕಾರರಿಗೆ ಪ್ರವಾಹದಿಂದ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಶೀಘ್ರವೇ ರಾಜ್ಯ ಸರಕಾರ ತ್ವರಿತಗತಿಯಲ್ಲಿ ನೇಕಾರರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆಗಳು: ಹಾನಿಯಾದ ನೇಕಾರರಿಗೆ ಮನೆ ನಿರ್ಮಿಸಿಕೊಡಬೇಕು. ಪ್ರವಾಹದಿಂದ ನಷ್ಟವಾದ ವಿದ್ಯುತ್‌ ಮತ್ತು ಕೈಮಗ್ಗಗಳ ಸಂಪೂರ್ಣ ವೆಚ್ಚವನ್ನು ಸರಕಾರ ಭರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಹಾನಿಯಾದ ಕಚ್ಚಾ ವಸ್ತುಗಳಿಗೆ ಪರಿಹಾರ ನೀಡಬೇಕು. ವೈಂಡಿಂಗ್‌ ಮತ್ತು ಡೋಲೆ ಮಶೀನ್‌ಗಳಿಗೂ ಸೂಕ್ತ ಧನ ಸಹಾಯ ಮಾಡಬೇಕು. ಶಾಶ್ವತ ಪರಿಹಾರಕ್ಕಾಗಿ ಸೂಕ್ತ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವುದು ಸೇರಿದಂತೆ ವಿವಿಧ ಬೇಡಿಕೆಗೆ ಶೀಘ್ರವೇ ಸ್ಪಂದಿಸಬೇಕೆಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ವಿಠuಲ ಮುರುಡಿ, ದೇವಾಂಗ ಸಂಘದ ರಾಜ್ಯಉಪಾಧ್ಯಕ್ಷ ಶಂಕ್ರಣ್ಣ ಮುರುಡಿ, ಏಕನಾಥ ಕೊಣ್ಣುರ, ಮನೋಹರ ಹೊನ್ನುಂಗರ, ಪ್ರಕಾಶ ಸೂಳಿಭಾವಿ, ಶಿವಾನಂದ ಬಳ್ಳಾರಿ, ನಾರಾಯಣ ಬೆಣ್ಣೂರ, ನಾರಾಯಣ ಚೌವಣ್ಣವರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next