Advertisement

ಹಣದ ಡ್ರಾ ಮಿತಿ ಹೆಚ್ಚಳಕ್ಕೆ ಆಗ್ರಹ

04:43 PM Jun 21, 2018 | |

ನಾಲತವಾಡ: ಸ್ಥಳಿಯ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಯಲ್ಲಿ ಗ್ರಾಹಕರಿಗೆ ವಿತರಿಸುವ ಹಣದ ಮಿತಿ 
ಹೆಚ್ಚಳಕ್ಕೆ ಆಗ್ರಹಿಸಿ ಸ್ಥಳಿಯ ಮಲ್ಲಿಕಾರ್ಜುನ ಸ್ಥಾವರಮಠ ನೇತೃತ್ವದಲ್ಲಿ ಅಡತಿ ಹಾಗೂ ಇತರೇ ವರ್ತಕರು ಶಾಖಾ ವ್ಯವಸ್ಥಾಪಕ ಎಸ್‌.ಎಂ. ಬೂದಿಹಾಳ ಅವರಿಗೆ ಮನವಿ  ಸಲ್ಲಿಸಿದರು.

Advertisement

ನೋಟ್‌ಬ್ಯಾನ್‌ ನಂತರ ಬ್ಯಾಂಕ್‌ನಲ್ಲಿ ಅವಶ್ಯಕತೆಗನುಗುಣವಾಗಿ ಹಣ ಪಡೆಯಲು ಗ್ರಾಹಕರಿಗೆ ತೀವ್ರ ತೊಂದರೆಯಾಗಿದೆ. ಪಟ್ಟಣ ಸುಮಾರು 20 ಸಾವಿರ ಜನಸಂಖ್ಯೆಯೊಂದಿಗೆ 41 ಹಳ್ಳಿ ವ್ಯಾಪ್ತಿಯಿದೆ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರೇ ಇರುವ ಪರಿಣಾಮ ಕೃಷಿ ಚಟುವಟಿಕೆ ಕೂಲಿಕಾರರಿಗೆ ಹಣ ಕೊಡಲು ಮಾಲೀಕರಿಗೆ ತೊಂದರೆಯಾಗಿದೆ. ನಿತ್ಯ ಬ್ಯಾಂಕ್‌ನಲ್ಲೇ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಕೇವಲ 5ರಿಂದ 10ಸಾವಿರ ರೂ. ಮಿತಿಯನ್ನು ಸರಳೀಕರಣಗೊಳಿಸಿ ಹೆಚ್ಚಿನ ಪ್ರಮಾಣದಲ್ಲಿ ಹಣ ಡ್ರಾ
ಮಾಡಿಕೊಳ್ಳಲು ವ್ಯವಸ್ಥೆ ಮಾಡಬೇಕು. ಸದಾ ಮುಚ್ಚಿರುವ ಎಟಿಎಂ 24 ಗಂಟೆ ಸೇವೆಗೊಳಪಡಿಸಬೇಕು. ಇತರೇ ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಲಾಗಿ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಬ್ಯಾಂಕಿನಲ್ಲಿ ಹಣ ಕೊಡುತ್ತಿದ್ದಾರೆ. ಶೀಘ್ರವೇ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಗ್ರಾಹಕರ ಬೇಡಿಕೆಗನುಗುಣವಾಗಿ ಹಣ ವಿತರಿಸಬೇಕು. 15 ದಿನಗಳಲ್ಲಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿದ ವ್ಯವಸ್ಥಾಪಕ ಎಸ್‌.ಎಂ. ಬೂದಿಹಾಳ ಮಾತನಾಡಿ, ಎಟಿಎಂ ನಲ್ಲಿ ಸುಮಾರು 20 ಲಕ್ಷಗಟ್ಟಲೇ
ಹಾಕುತ್ತಿದ್ದೇವೆ. ಬೇಗನೆ ಡ್ರಾ ಮಾಡಿಕೊಳ್ಳುತ್ತಿದ್ದರ ಪರಿಣಾಮ ಹಣ ಕೊರತೆ ಉಂಟಾಗುತ್ತದೆ. ಮೇಲಧಿಕಾರಿಗಳ ಗಮನಕ್ಕೆ ತಂದು 15 ದಿನದೊಳಗೆ ಸರಿಪಡಿಸುವ ಭರವಸೆ ನೀಡಿದರು.

ವರ್ತಕರಾದ ಮಲ್ಲಿಕಾರ್ಜುನ ಸ್ಥಾವರಮಠ, ಉಮೇಶ ಇಲಕಲ್‌, ಚಂದ್ರು ಗಂಗನಗೌಡ, ಸುಭಾಸ ಡಿಗ್ಗಿ, ವೀರೇಶ
ಇಲಕಲ್‌, ಎ.ಎಚ್‌. ಹಣಗಿ, ಕೆ.ಐ. ಖತೀಬ, ಎಸ್‌.ಪಿ. ಜೋಶಿ, ಬಿ.ಎಂ. ಹುಡೇದ, ವೀರೇಶ ಕಂದಗಲ್‌, ಬಿ.ವೈ.
ಜೈನಾಪುರ, ಶಶಿ ಕಂದಗಲ್‌, ಕೆ.ಪಿ. ಕೊಣ್ಣೂರ, ಅಬ್ದುಲಗನಿ ಅವಟಿ (ದೇಸಾಯಿ), ಬಿ.ಕೆ. ಅವಟಿ, ಎನ್‌.ಎ. ಕಂದಗಲ್‌
ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next