Advertisement

ಮದ್ಯಪಾನ ನಿಷೇಧಕ್ಕೆ ಆಗ್ರಹ

03:46 PM Oct 03, 2017 | |

ಯಾದಗಿರಿ: ಮದ್ಯಪಾನ ಸಂಪೂರ್ಣವಾಗಿ ನಿಷೇಧಿಸಬೇಕು ಹಾಗೂ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ ಹತ್ಯೆಗೈದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ಸದಸ್ಯರು ಸೋಮವಾರ ನಗರದ ಗಾಂಧೀಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಸಮಾಜದಲ್ಲಿ ಅನಕ್ಷರತೆ, ಬಡತನ, ಮೌಡ್ಯತೆಯಿಂದ ಜನ ಸಾಮಾನ್ಯರು ನರಳುತ್ತಿದ್ದಾರೆ. ಆದ್ದರಿಂದ ಮದ್ಯಪಾನ
ಮಾದಕ ವಸ್ತುಗಳನ್ನು ಮುಕ್ತಗೊಳಿಸಬೇಕೆಂದು ಒತ್ತಾಯಿಸಿದರು.

ಹಗಲಿರುಳು ದುಡಿದು ಸಂಪಾದಿಸಿದ ದುಡ್ಡುನ್ನು ಮದ್ಯವ್ಯಸನಿಗಳು ಕ್ಷಣ ಮಾತ್ರದಲ್ಲಿ ಹಾಳು ಮಾಡುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಕುಟುಂಬಗಳ ಆರ್ಥಿಕ ದುಸ್ಥಿತಿಯಿಂದ ಅನೇಕ ಜನರು ನರುಳುವಂತೆ ಮಾಡಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ರೈತರು, ಕೃಷಿಕರು, ಕೂಲಿಕಾರರು ಮುಖ್ಯವಾಗಿ ಬಡವರು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆಲ್ಲ ಸರ್ಕಾರ ಒಂದು ಕಡೇ ಕುಮ್ಮಕ್ಕು ನೀಡುತ್ತಿದ್ದು,
ಸರ್ಕಾರದ ಈ ದ್ವಿಮುಖ ಧರೋಣೆಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ಬದುಕಿಗೆ ಮಾರಕವಾಗುತ್ತಿದ್ದು, ಮದ್ಯಪಾನ ನಿಷೇಧಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಸತ್ಯಂಪೇಟ್‌,ಗುಂಡಣ್ಣ ಕಲಬುರ್ಗಿ, ಎಸ್‌. ಎಚ್‌. ನಾಯಕ, ಭೀಮರಾಯ ಲಿಂಗೇರಿ,
ವಿಶ್ವನಾಥ ಗೊಂದೆಡಗಿ, ಎಸ್‌.ಎಂ. ಸಾಗರ, ನಾಗರತ್ನ ಪಾಟೀಲ್‌ ಯಕ್ಷಂತಿ, ವೆಂಕಪ್ಪ ಅಲೆಮನಿ, ಅಯ್ಯಣ್ಣ ಹಾಲಭಾವಿ, ಕಲ್ಪನಾ ಗುರುಸಣಗಿ, ಶರಣಗೌಡ ಗೂಗಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next