Advertisement

ಸಮರ್ಪಕ ವಿದ್ಯುತ್‌ಗೆ ಆಗ್ರಹ

11:54 AM Feb 25, 2020 | Suhan S |

ಚನ್ನಗಿರಿ: ಸಂತೇಬೆನ್ನೂರು ಭಾಗದಲ್ಲಿ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುವಂತೆ ಆಗ್ರಹಿಸಿ ಸೋಮವಾರ ಬೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದ್ದಾರೆ. ರೈತರಿಗೆ ನೀಡುತ್ತಿದ್ದ ವಿದ್ಯುತ್‌ನಲ್ಲಿ ಸಮಯವನ್ನು ಕಡಿತಗೊಳಿಸಲಾಗುತ್ತಿದೆ. ಐದೂವರೆ ಗಂಟೆಗಳ ಕಾಲ ವಿದ್ಯುತ್‌ ನೀಡುವಂತೆ ಬೆಸ್ಕಾಂ ಕಚೇರಿ ಮುಂದೆ ಒತ್ತಾಯಿಸಿದರು.

Advertisement

ಸಂತೇಬೆನ್ನೂರು, ಬಸವಾಪಟ್ಟಣ, ಕೆರೆಬಿಳಚಿ ಹಾಗೂ ತ್ಯಾವಣಿಗೆ ವ್ಯಾಪ್ತಿಯಲ್ಲಿ ತ್ರೀಫೇಸ್‌ ವಿದ್ಯುತ್‌ನ್ನು ದಿನಕ್ಕೆ 7 ಗಂಟೆ ನೀಡುವ ಬದಲು ಕೇವಲ 5ಗಂಟೆ ಮಾತ್ರ ನೀಡಲಾಗುತ್ತಿದೆ. ಇದರಿಂದ ತೋಟಗಳಿಗೆ ನೀರನ್ನು ಹಾಯಿಸಲು ಸಾಧ್ಯವಾಗುತ್ತಿಲ್ಲ, ಎರಡು ದಿನಗಳ ಕಾಲಾವಕಾಶ ನೀಡಿದ್ದರೂ ಸರಿಯಾದ ರೀತಿಯಲ್ಲಿ ರೈತರಿಗೆ ದಿನಕ್ಕೆ 7ಗಂಟೆ ವಿದ್ಯುತ್‌ ನೀಡುತ್ತಿಲ್ಲ. ಆದ್ದರಿಂದ ಸಮರ್ಪಕವಾಗಿ ವಿದ್ಯುತ್‌ ನೀಡುವವರೆಗೆ ಬೆಸ್ಕಾಂ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಪ್ರತಿಭಟನಾ ನಿರತ ರೈತರು ಎಚ್ಚರಿಸಿದರು.

ಈ ವೇಳೆ ಇಲಾಖೆಯ ಹಿರಿಯ ಇಂಜಿನಿಯರ್‌ ಕೆ.ಪಾಟೀಲ್‌ ಸ್ಥಳಕ್ಕೆ ಆಗಮಿಸಿ, ತಾಂತ್ರಿಕ ಸಮಸ್ಯೆ ಇರುವುದರಿಂದ ಐದು ಗಂಟೆ ವಿದ್ಯುತ್‌ ನೀಡಲಾಗುತ್ತಿದೆ. ಈಗ ನಿರಂತರ ಜ್ಯೋತಿಯಲ್ಲಿ ಅರ್ಧ ಗಂಟೆ ವ್ಯತ್ಯಾಸ ಮಾಡಿ ರೈತರಿಗೆ ಐದುವರೆ ಗಂಟೆ ವಿದ್ಯುತ್‌ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಧರಣಿ ನಿಲ್ಲಿಸಿದರು.

ರೈತ ಸಂಘದ ಹೋಬಳಿ ಅಧ್ಯಕ್ಷ ಗೂಡಾಳ್‌ ಮಹೇಶ್ವರಪ್ಪ, ಜಿಪಂ ಸದಸ್ಯೆ ಪಿ.ವಾಗೀಶ್‌, ತಾಲೂಕು ರೈತ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಗ್ರಾಪಂ ಅಧ್ಯಕ್ಷ ದೇವೇಂದ್ರಪ್ಪ, ಲೋಹಿತ್‌ ಕುಮಾರ್‌, ಸಹಾಯಕ ಇಂಜಿನಿಯರ್‌ ನಾಗರಾಜ್‌, ಬೆಸ್ಕಾಂ ಸಹಾಯಕ ಇಂಜಿನಿಯರ್‌ ಶಶಿಕುಮಾರ್‌, ತಾಂತ್ರಿಕ ಇಂಜಿನಿಯರ್‌ ಲಿಂಗರಾಜ್‌, ರೈತರಾದ ಮಹೇಶ್ವರಪ್ಪ, ಜಗಳೂರು ಹರೀಶ್‌, ಹಾಲೇಶ್‌, ಜಯದೇವ್‌, ಮಲ್ಲಿಕಾರ್ಜುನ್‌, ಕಾಯಿಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next