ಹಳ್ಳೂರ: ಹಳ್ಳೂರ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದರಿಂದತೊಂದರೆಯಾಗಿದೆ ಎಂದು ಆರೋಪಿಸಿವಿದ್ಯಾರ್ಥಿಗಳು, ರೈತ ಸಂಘಟನೆಗಳು,ಗ್ರಾಮಸ್ಥರು ಸೋಮವಾರ ಹಳ್ಳೂರಕ್ರಾಸ್ (ಗುಬ್ಬಿ ಬಸ್) ನಿಲ್ದಾಣದಲ್ಲಿ ಪ್ರತಿಭಟಿಸಿದರು.
ಗ್ರಾಮದ ವಿದ್ಯಾರ್ಥಿಗಳು, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಗ್ರಾಮಸ್ಥರು ಸಂಬಂಧಿಸಿದ ರಾಯಬಾಗ, ಗೋಕಾಕ ಘಟಕ ವ್ಯವಸ್ಥಾಪಕರಿಗೆ ಅನೇಕಬಾರಿ ಹೇಳಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬಸ್ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲದಂತಾಗಿದೆ. ಅಧಿಕಾರಿಗಳು ಬರಿ ಹಾರಿಕೆಯ ಮಾತುಗಳನ್ನು ಆಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶಿವಾಪೂರ(ಹ), ಖಾನಟ್ಟಿ, ಮುನ್ಯಾಳ, ಸೈದಾಪೂರ, ಹಳ್ಳೂರ, ಗಾಂಧಿ ನಗರ(ಹ), ಕಪ್ಪಲಗುದ್ದಿ ಗ್ರಾಮದ ಪ್ರಯಾಣಿಕರಿಗೆಅನುಕೂಲವಾಗುವಂತೆ ನಿರಂತರಬಸ್‌ಗಳನ್ನು ಬಿಡಬೇಕು. ಅಲ್ಲದೇ ಬೆಳಗ್ಗೆಯಿಂದ ಸಾಯಂಕಾಲದವರೆಗೆ ನಿರಂತರವಾಗಿ ಹಳ್ಳೂರ ಮಾರ್ಗವಾಗಿ ಮೂಡಲಗಿ-ಮಹಾಲಿಂಗಪೂರ ಬಸ್ ಬಿಡಲು ಹಾಗೂ ಹಾನಗಲ್, ಸೊಲ್ಲಾಪೂರ ಹಾಗೂ ಇತರೆ ಸರ್ಕಾರಿ ಬಸ್‌ಗಳನ್ನು ಗಾಂಧಿ ನಗರ(ಹ), ಹಳ್ಳೂರ ಕ್ರಾಸ್‌ನಲ್ಲಿ ನಿಲುಗಡೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಮೂಡಲಗಿ ಸಾರಿಗೆ ನಿಯಂತ್ರಕ ಎಸ್.ಎ. ನದಾಫ್ ಸ್ಥಳಕ್ಕೆ ಆಗಮಿಸಿ, ಮೇಲಧಿಕಾರಿಗಳಿಗೆನಿಮ್ಮ ಮನವಿ ಬಗ್ಗೆ ತಿಳಿಸಿ ಒಂದುವಾರದೊಳಗೆ ಹೆಚ್ಚುವರಿ ಬಸ್ ಬಿಡುಗಡೆ, ಎಕ್ಸ್‌ಪ್ರೆಸ್ ಬಸ್‌ಗಳನ್ನು ನಿಲ್ಲಿಸುವಂತೆ ತಿಳಿಸುತ್ತೇನೆ ಎಂದು ಪ್ರತಿಭಟನಾ ನಿರತರ ಮನ ವೊಲಿಸಿ ಪ್ರತಿಭಟನೆ ಕೈ ಬಿಡುವಂತೆ ವಿನಂತಿಸಿದರು. ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಬಸ್ ಬಿಡದಿದ್ದರೆ ಶಾಂತಿಯುತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆ ಮುಖಂಡ ಶ್ರೀಶೈಲ ಅಂಗಡಿ ಹಾಗೂ ವಿದ್ಯಾರ್ಥಿಗಳು ಮಾತನಾಡಿದರು.ಪವನ ಅಂಗಡಿ, ಕಿರಣ ಬಿಜ್ಜರಗಿ,ಪ್ರವೀಣ, ಮಹಾವೀರ ಛಬ್ಬಿ, ವಿಠuಲ ಬೆಳಗಲಿ,ಗುರು ಕುಳಲಿ, ಸೇರಿದಂತೆ ನೂರಾರು ಶಾಲಾಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಮೂಡಲಗಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.