Advertisement

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಆಗ್ರಹಿಸಿ ರಕ್ತದಲ್ಲಿ ಮುಖ್ಯಮಂತ್ರಿಗೆ ಪತ್ರ

09:05 PM Feb 11, 2021 | sudhir |

ವಿಜಯಪುರ: ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ 2-ಎ ಮೀಸಲಾತಿ ನೀಡಲು ಸಮಾಜದ ಎರಡು ಪೀಠಗಳ ಜಗದ್ಗುರುಗಳು ಬೆಂಗಳೂರಿಗೆ ಪಾದಯಾತ್ರೆ ನಡೆಸಿದ್ದಾರೆ. ಈ ಹಂತದಲ್ಲೇ ವಿಜಯಪುರ ನಗರದ ಯುವಕನೊಬ್ಬ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಕ್ತದಲ್ಲಿ ಪತ್ರ ಬರೆದು, ಸಮಾಜದ ಜಗದ್ಗುರುಗಳ ಮೂಲಕ ಸರ್ಕಾರಕ್ಕೆ ರವಾನಿಸಿ ಗಮನ ಸೆಳೆದಿದ್ದಾನೆ.

Advertisement

ನಗರದ ಗ್ಯಾಂಗ್‍ಬಾವಡಿ ನಿವಾಸಿ ಮಂಜುನಾಥ ನಿಡೋಣಿ ಎಂಬ ಯುಕನೇ ತಮ್ಮ ರಕ್ತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರವನ್ನು ಬರೆದು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿರುವ ಯುವಕ. ಸದ್ಯ ಪಾದಯಾತ್ರೆಯಲ್ಲೇ ತೆರಳುತ್ತಿರುವ ಯುವಕ ಮಂಜುನಾಥ, ತುಮಕೂರಿನಲ್ಲಿ ತಮ್ಮ ರಕ್ತದಲ್ಲಿ ತಾನೇ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಶ್ರೀಗಳಿಗೆ ಸಲ್ಲಿಸಿದ್ದಾರೆ.

ಕೂಡಲಸಂಗಮದ ಬಸವಜಯಮೃತ್ಯುಂಜಯ ಶ್ರೀಗಳ ಮೂಲಕ ಮುಖ್ಯಮಂತ್ರಿ ಅವರಿಗೆ ತಮ್ಮ ರಕ್ತದಲ್ಲಿ ಬರೆದ ಪತ್ರವನ್ನು ತಲುಪಿಸಲು ಮುಂದಾದ ಯುವಕ, ರಕ್ತ ಕೊಟ್ಟೆವು ಮೀಸಲಾತಿ ಬಿಡೆವು ಎಂದು ಜಗದ್ಗುರುಗಳು ಸಂದೇಶ ನೀಡಿದ್ದಾರೆ. ಹೀಗಾಗಿ ರಕ್ತದಲ್ಲೇ ಸರ್ಕಾರಕ್ಕೆ ಪತ್ರ ಬರೆದು ಮೀಸಲು ಸೌಲಭ್ಯ ನೀಡಲು ಆಗ್ರಹಿಸಿದ್ಧೇನೆ ಎಂದಿದ್ದಾರೆ.

ಪಂಚಮಸಾಲಿ ಸಮಾಜ ಕೃಷಿಕ ಸಮಾಜವಾಗಿದ್ದು, ಬಡವರು ಕೂಲಿಕಾರ್ಮಿಕರಿದ್ದಾರೆ, ಸಮಾಜದ ಯುವ ಜನತೆಗೆ ಔದ್ಯೋಗಿಕ ಮತ್ತು ಶಿಕ್ಷಣದ ದೃಷ್ಟಿಯಿಂದ ಮೀಸಲಾತಿ ಅವಶ್ಯಕತೆ ಇದೆ. ಇದೇ ಉದ್ಧೇಶಕ್ಕಾಗಿ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಶ್ರೀಗಳು, ಹರಿಹರದ ವಚನಾನಂದ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಕೊನೆಯ ಹಂತ ತಲುಪಿದೆ. ಶ್ರೀಗಳ ನೇತೃತ್ವದ ಪಾದಯಾತ್ರೆ ಬೆಂಗಳೂರು ತಲುಪವ ಮುನ್ನವೇ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಿ, ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.

Advertisement

ಇದನ್ನೂ ಓದಿ:ಗಂಡು ಮಕ್ಕಳಿಲ್ಲದ ಕೊರಗು : ತನ್ನ 4 ಹೆಣ್ಣು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಪಂಚಮಸಾಲಿ ಸಮಾಜದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಧರೆಪ್ಪ ಟಕ್ಕನ್ನವರ, ಪ್ರಮೋದ ಬಿಳ್ಳೂರ, ಸುಭಾಶ ಕೊಪ್ಪದ, ಸಂತೋಷ ಗಾಳಿ, ಆರ್.ಎಸ್.ಹೊನಗೌಡ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next