Advertisement

ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಫೆ. 28ರಂದು ಬ್ಯಾಂಕ್‌ ಮುಷ್ಕರ

03:45 AM Feb 09, 2017 | Team Udayavani |

ಮಂಗಳೂರು: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಿಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ದೇಶಾದ್ಯಂತ ಫೆ. 28ರಂದು ಬ್ಯಾಂಕ್‌ ಮುಷ್ಕರ ಕೈಗೊಳ್ಳಲು ಬ್ಯಾಂಕ್‌ ಸಂಘಟನೆಗಳ ಸಂಯುಕ್ತ ವೇದಿಕೆ ಕರೆ ನೀಡಿದೆ ಎಂದು ಅಖೀಲ ಭಾರತ ಬ್ಯಾಂಕ್‌ ಅಧಿಕಾರಿಗಳ ಮಹಾ ಒಕ್ಕೂಟದ ಅಧ್ಯಕ್ಷ ಎಲ್ಲೂರು ಸುದರ್ಶನ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸರಕಾರವು ಸುಧಾರಣೆಗಳ ಹೆಸರಿನಲ್ಲಿ ಕಾರ್ಮಿಕ ಕಾಯಿದೆಗೆ ಅನೇಕ ತಿದ್ದುಪಡಿಗಳನ್ನು ತರಲು ಉದ್ದೇಶಿಧಿಸಿರುಧಿವುದು ಕಾರ್ಮಿಕರಿಗೆ ಮಾರಕವಾಗಲಿದೆ. ಕೇಂದ್ರ ಸರಕಾರಿ ನೌಕರರಿಗೆ ಕೊಟ್ಟ 20 ಲಕ್ಷ ರೂ. ಗ್ರ್ಯಾಚ್ಯುಟಿಯನ್ನು ಗ್ರ್ಯಾಚ್ಯುಟಿ ಕಾಯಿದೆಗೆ ತಿದ್ದುಪಡಿ ತಂದು 2016 ಜ. 1ರ ಪೂರ್ವಾನ್ವಯವಾಗುವಂತೆ ಕಾರ್ಮಿಕರಿಗೆ 20 ಲಕ್ಷ ರೂ. ಸಿಗುವಂತೆ ಮಾಡಬೇಕು.  ನೋಟು ಅಪಮೌಲ್ಯದಿಂದ ತುರ್ತು ಕೆಲಸಗಳು ಬಾಕಿ ಉಳಿದಿವೆ. ಸಾಲ ನೀಡುವ ಪ್ರಕ್ರಿಯೆಯು ನಡೆಯುತ್ತಿಲ್ಲ. ಬ್ಯಾಂಕ್‌ನ ಸಾಮಾನ್ಯ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂದರು.

ಕಾರ್ಪೊರೇಶನ್‌ ಬ್ಯಾಂಕ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ಏಕನಾಥ ಬಾಳಿಗ, ಸಿಬಂದಿ ಒತ್ತಡ ಕಡಿಮೆ ಯಾಗಬೇಕಾದರೆ ತುರ್ತಾಗಿ ಬ್ಯಾಂಕ್‌ ಸಿಬಂದಿ ಹಾಗೂ ಅಧಿಕಾರಿಗಳ ನೇಮಕವಾಗಬೇಕು. ಈಗಾಗಲೇ ಒಡಂಬ ಡಿಕೆಯಾಗಿರುವ ಅನೇಕ ಒಪ್ಪಂದಗಳನ್ನು ಭಾರತೀಯ ಬ್ಯಾಂಕ್‌ ಸಂಘವು ವಿಳಂಬ ಮಾಡುತ್ತಿದ್ದು, ದೇಶದಲ್ಲಿ ಸುಮಾರು 7.5 ಲಕ್ಷ ಪಿಂಚಣಿದಾರರು ತೊಂದರೆ ಅನು ಭವಿಸುತ್ತಿದ್ದಾರೆ. ಹೀಗೆ ಹಲವು ಸಮಸ್ಯೆಧಿಗಳನ್ನು ಬ್ಯಾಂಕ್‌ ಸಿಬಂದಿ ಅನುಭವಿಸುತ್ತಿದ್ದು, ಫೆ. 28ರೊಳಗೆ ಬೇಡಿಕೆ ಈಡೇರದಿದ್ದಲ್ಲಿ ಮುಷ್ಕರ ಮಾಡಲಿದ್ದೇವೆ ಎಂದರು.

ಕೆನರಾ ಬ್ಯಾಂಕ್‌ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಣಿಮಾರನ್‌, ಕಾರ್ಪೊರೇಶನ್‌ ಬ್ಯಾಂಕ್‌ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್‌ ಶೆಟ್ಟಿ, ರವಿ ಪಿಂಟೋ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next