Advertisement

ಅನಧಿಕೃತ ಬ್ಯೂಟಿ ಪಾರ್ಲರ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹ

12:51 PM Aug 02, 2018 | Team Udayavani |

ಮೈಸೂರು: ನಗರದಲ್ಲಿರುವ ಬ್ಯೂಟಿ ಪಾರ್ಲರ್‌ಗಳ ಮೇಲೆ ಪೊಲೀಸರು ನಡೆಸುತ್ತಿರುವ ದಾಳಿಯಿಂದಾಗಿ, ನಗರದಲ್ಲಿ ಪ್ರಮಾಣಿಕವಾಗಿ ಬ್ಯೂಟಿ ಪಾರ್ಲರ್‌ ನಡೆಸುವವರು ತಲೆ ತಗ್ಗಿಸುವಂತಾಗಿದೆ ಎಂದು ಮೈಸೂರು ಜಿಲ್ಲಾ ಬ್ಯೂಟಿಷೀಯನ್‌ ಮತ್ತು ಬ್ಯೂಟಿ ಪಾರ್ಲರ್‌ ಮಾಲಿಕರ ಸಂಘದ ಸದಸ್ಯರು ಬೇಸರ ವ್ಯಕ್ತಪಡಿಸಿದರು. 

Advertisement

ನಗರದಲ್ಲಿ ಕಳೆದ 20 ವರ್ಷಗಳಿಂದ ನಮ್ಮ ಸಂಘ ಕಾರ್ಯನಿರ್ವಹಿಸುತ್ತಿದ್ದು, ಅನೇಕರು ಪ್ರಮಾಣಿಕವಾಗಿ ಬ್ಯೂಟಿ ಪಾರ್ಲರ್‌ ನಡೆಸುತ್ತಿದ್ದಾರೆ. ಅಲ್ಲದೆ ಇದೇ ವೃತ್ತಿಯನ್ನು ನಂಬಿ ಕುಟಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಬ್ಯೂಟಿ ಪಾರ್ಲರ್‌ಗಳ ಮೇಲೆ ನಡೆಯುತ್ತಿರುವ ದಾಳಿ ನಮ್ಮ ವೃತ್ತಿಯ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ.

ಆದ್ದರಿಂದ ಅನಧಿಕೃತ ಪಾರ್ಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಮೈಸೂರು ಜಿಲ್ಲಾ ಬ್ಯೂಟಿಷೀಯನ್‌ ಮತ್ತು ಬ್ಯೂಟಿ ಪಾರ್ಲರ್‌ ಮಾಲಿಕರ ಸಂಘದ ಅಧ್ಯಕ್ಷೆ ಎ.ಸುಜಾತ ಸಿಂಗ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಅನಧಿಕೃ ಪಾರ್ಲರ್‌ಗಳಿವೆ: ನಗರದಲ್ಲಿ ಅಂದಾಜು 600ಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 250 ಪಾರ್ಲರ್‌ಗಳು ಮಾತ್ರ ಸಂಘದಲ್ಲಿ ನೊಂದಣಿ ಮಾಡಿಸಿವೆ.

ಹೀಗಾಗಿ ಶೇ.50ಕ್ಕೂ ಹೆಚ್ಚು ಪಾರ್ಲರ್‌ಗಳು ಅನಧಿಕೃತವಾಗಿ ನಡೆಯುತ್ತಿವೆ ಯಾವ ಪರವಾನಗಿ ಇಲ್ಲದೆ ನಡೆಯುತ್ತಿರುವ ಈ ಪಾರ್ಲರ್‌ಗಳ ಬಗ್ಗೆ ಈ ಹಿಂದೆಯೇ ಪೊಲೀಸ್‌ ಆಯುಕ್ತರು ಹಾಗೂ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರೂ, ಈವರೆಗೆ ಯಾವ ಕ್ರಮ ಕೈಗೊಂಡಿಲ್ಲ. ಆದರೆ ಇತ್ತೀಚೆಗೆ ನಡೆದಿರುವ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಪಾಲಿಕೆ ಹಾಗೂ ಪೊಲೀಸರು ಇದೀಗ ಬ್ಯೂಟಿ ಪಾರ್ಲರ್‌ಗಳ ಮೇಲೆ ದಾಳಿ ಆರಂಭಿಸಿದ್ದಾರೆ ಎಂದರು. 

Advertisement

ನಿರ್ವಹಣೆ ಅಗತ್ಯವಿದೆ: ಬ್ಯೂಟಿ ಪಾರ್ಲರ್‌ ನಡೆಸಬೇಕಾದರೆ ಒಂದಿಷ್ಟು ನಿಯಮಗಳಿದ್ದು, ಅನಧಿಕೃತ ಪಾರ್ಲರ್‌ಗಳು ಇದನ್ನು ಪಾಲಿಸುತ್ತಿಲ್ಲ. ಕೆಲವು ಖಾಸಗಿ ಸಂಸ್ಥೆಗಳು ಆರು ತಿಂಗಳು ನೀಡುವ ಬ್ಯೂಟಿಷಿಯನ್‌ ಕೋರ್ಸ್‌ ಅನ್ನು ಕೇವಲ ಒಂದು ತಿಂಗಳು ನಡೆಸಿ, ಪ್ರಮಾಣ ಪತ್ರಗಳನ್ನು ನೀಡುತ್ತಿವೆ. ಇದರಿಂದ ಇಂತಹ ಸಮಸ್ಯೆಗಳು ಉಂಟಾಗುತ್ತಿದೆ.

ಆದ್ದರಿಂದ ಬ್ಯೂಟಿ ಪಾರ್ಲರ್‌ ನಡೆಸಲು ಪರವಾನಗಿ ನೀಡುವ ಮೊದಲು ನಗರ ಪಾಲಿಕೆ ಕೆಲವು ಮಾನದಂಡಗಳನ್ನು ಅನುಸರಿಸುವ ಮೂಲಕ ಪಾರ್ಲರ್‌ ನಡೆಸಲು ಅಗತ್ಯವಿರುವ ಮೂಲಸೌಲಭ್ಯಗಳ ಬಗ್ಗೆ ನಿಗಾ ವಹಿಸಬೇಕಿದೆ ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷೆ ಜರೀನಾ ಇಮಿ¤ಯಾಸ್‌, ಸದಸ್ಯರಾದ ವೇದಾ ರಾಯ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next