Advertisement
12 ರಾಜ್ಯಗಳ 44 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. ಕಳೆದ 4 ವಾರಗಳಲ್ಲಿ ದೇಶದ 18 ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು, ಹೊಸ ಪ್ರಕರಣಗಳ ಪೈಕಿ ಶೇ.47.5ರಷ್ಟು ಕೇಸುಗಳು ಈ ಜಿಲ್ಲೆಗಳಿಗೆ ಸೀಮಿತವಾಗಿವೆ. ಇವುಗಳಲ್ಲಿ 10 ಜಿಲ್ಲೆಗಳು ಕೇರಳದ್ದಾಗಿದ್ದರೆ, ಮಹಾರಾಷ್ಟ್ರದ 3 ಮತ್ತು ಉಳಿದವು ಈಶಾನ್ಯ ರಾಜ್ಯಗಳ ಜಿಲ್ಲೆಗಳು ಎಂದೂ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Related Articles
Advertisement
ಅಕ್ಟೋಬರ್-ನವೆಂಬರ್ ವೇಳೆಗೆ ಇನ್ನೂ 4 ಫಾರ್ಮಾ ಕಂಪೆನಿಗಳು ಲಸಿಕೆ ಉತ್ಪಾದನೆ ಆರಂಭಿಸಲಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯಾ ಮಾಹಿತಿ ನೀಡಿದ್ದಾರೆ. ಈಗಾಗಲೇ ದೇಶದಲ್ಲಿ 47 ಕೋಟಿ ಡೋಸ್ ಲಸಿಕೆ ವಿತರಣೆ ಮುಗಿದಿದೆ. ಮುಂದಿನ ದಿನಗಳಲ್ಲಿ ಬಯಾಲಾಜಿಕಲ್ ಇ , ನೋವರ್ಟಿಸ್ ಲಸಿಕೆ ಯೂ ದೇಶದಲ್ಲಿ ಲಭ್ಯವಾಗಲಿವೆ. ಝೈಡಸ್ ಕ್ಯಾಡಿಲ್ಲಾಗೂ ತುರ್ತು ಬಳಕೆಗೆ ಅನುಮತಿ ನೀಡಲಾಗುತ್ತದೆ ಎಂದಿದ್ದಾರೆ.
ವುಹಾನ್‌ನಲ್ಲಿ ಅಬ್ಬರ :
ಕೊರೊನಾ ಜನ್ಮಸ್ಥಾನ ಚೀನದ ವುಹಾನ್‌ನಲ್ಲಿ ಮತ್ತೆ ಸೋಂಕು ಅಬ್ಬರಿ ಸಲಾರಂಭಿಸಿದೆ. ದಿನೇ ದಿನೆ ಪ್ರಕರಣ ಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾಮೂಹಿಕ ಪರೀಕ್ಷೆಗೆ ಚೀನ ಸರಕಾರ ಮುಂದಾಗಿದೆ. ವುಹಾನ್‌ನ ಎಲ್ಲ 1.10 ಕೋಟಿ ಮಂದಿ ಯನ್ನೂ ಪರೀಕ್ಷೆಗೆ ಒಳಪಡಿಸಲು ನಿರ್ಧ ರಿಸಲಾಗಿದೆ. ಇದೇ ವೇಳೆ, ಜರ್ಮನಿಯಲ್ಲಿ 12 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿ ಗೂ ಲಸಿಕೆ ವಿತರಣೆ ಆರಂಭವಾಗಿದೆ.