Advertisement
ರಾಜ್ಯದಲ್ಲಿ ಇನ್ನೆರಡು ತಿಂಗಳಲ್ಲಿ 3ನೇ ಅಲೆ ಉಚ್ಛಾ†ಯ ಸ್ಥಿತಿಗೆ ತಲ ಪುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು. ಮೊದಲ ಅಲೆಯು 3 ತಿಂಗಳಲ್ಲಿ ಹಾಗೂ 2ನೇ ಅಲೆ ಒಂದೂವರೆ ತಿಂಗಳಲ್ಲಿ ಹೆಚ್ಚು ತೀವ್ರವಾಗಿತ್ತು. ಮೂರನೇ ಅಲೆಯು ಮೊದಲೆರಡು ಅಲೆಗಳಿಗಿಂತ ಬೇಗ ಉಚ್ಛಾ†ಯ ಸ್ಥಿತಿಗೆ ತಲುಪಬಹುದು. ಆದ್ದರಿಂದ ಸರಕಾರ ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದಿದ್ದು ಸೋಂಕು ಹರಡದಂತೆ ನೋಡಿಕೊಳ್ಳುವುದು ಅಗತ್ಯ ಎಂದು ಎಚ್‌ಸಿಜಿ ಆಸ್ಪತ್ರೆ ವೈದ್ಯ ಡಾ| ವಿಶಾಲ್ ರಾವ್ ಹೇಳಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನ ಕೊರೊನಾ ವೈರಸ್ ರೂಪಾಂತರ ತಳಿಗಳು ಜತೆಗೂಡಿ ಡಬಲ್ ಮ್ಯೂಟೆಂಟ್ (ಬಿ.1.617) ಎಂಬ ಹೊಸ ತಳಿ ಕಾಣಿಸಿಕೊಂಡಿದೆ. ಮೂಲ ಕೊರೊನಾ ವೈರಸ್‌ಗೆ ಹೋಲಿಸಿದರೆ ಈ ತಳಿ ಹೆಚ್ಚು ಪ್ರಬಲವಾಗಿತ್ತು ಎಂಬ ಕಾರಣಕ್ಕೆ ಇದನ್ನು ಡೆಲ್ಟಾ ಎಂದು ಕರೆಯಲಾಗಿತ್ತು. ಡಿಸೆಂಬರ್ ಮೊದಲ ವಾರದಲ್ಲಿ ಇದು ರಾಜ್ಯ ದಲ್ಲಿ ಪತ್ತೆಯಾಯಿತು. ಆಗ ಅಷ್ಟೊಂದು ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ. ಎಪ್ರಿಲ್, ಮೇ ತಿಂಗಳಲ್ಲಿ ತೀವ್ರತೆ ಹೆಚ್ಚಾಯಿತು. ಈಗ ಡೆಲ್ಟಾದ ಮುಂದುವರಿದ ಭಾಗವಾಗಿ ಡೆಲ್ಟಾ ಪ್ಲಸ್ (ಬಿ.1.617.2.1) ಕಾಣಿಸಿಕೊಂಡಿದೆ ಎಂದು ವಂಶವಾಹಿ ತಜ್ಞರು ತಿಳಿಸಿದ್ದಾರೆ. ರೂಪಾಂತರಗಳು ಶಕ್ತಿಶಾಲಿ
ಎರಡು ಮೂರು ತಳಿಗಳು ಸೇರಿ ರೂಪಾಂತರಗಳು ಉಂಟಾಗಿರುತ್ತವೆ. ವೈರಾಣು ಹೊಸ ತಳಿ ಬಂದಾಗ ಅದರ ಸಾಮರ್ಥ್ಯ ಹೆಚ್ಚಿರುತ್ತದೆ ಎಂದು ಡಾ| ವಿಶಾಲ್ ರಾವ್ ತಿಳಿಸಿದ್ದಾರೆ.
Related Articles
ಕೊರೊನಾ ವೈರಸ್ ಅಲೆ, ಡೆಲ್ಟಾ, ಡೆಲ್ಟಾ+ ಏನೇ ಬಂದರೂ ಆತಂಕಕ್ಕೊಳಗಾಗಬೇಡಿ. ಅವುಗಳ ಬಗ್ಗೆ ತಜ್ಞರು,ವೈದ್ಯರು ಸಂಶೋಧನೆ ನಡೆಸುತ್ತಾರೆ. ಲಸಿಕೆ ಹಾಕಿಸಿಕೊಳ್ಳು ವುದು, ಕೊರೊನಾ ಮಾರ್ಗಸೂಚಿ ಪಾಲಿಸುವುದು, ಎಲ್ಲ ಕಡೆಗಳಲ್ಲೂ ಸ್ವತ್ಛತೆ ಪಾಲಿಸುವುದು ಮುಂತಾದ ಕ್ರಮಗಳಿಂದ ಕೊರೊನಾದಿಂದ ರಕ್ಷಣೆ ಸಾಧ್ಯ ಎಂದು ಮಣಿಪಾಲ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ| ಸತ್ಯನಾರಾಯಣ ಮೈಸೂರು ತಿಳಿಸಿದ್ದಾರೆ.
Advertisement
ಡೆಲ್ಟಾ ಪ್ಲಸ್ ವಿಶೇಷತೆ– ಹಿಂದಿನ ತಳಿಗೆ ಹೋಲಿಸಿದರೆ ಸೋಂಕು ಸಾಮರ್ಥ್ಯ ಸಾಕಷ್ಟು ಹೆಚ್ಚು.
– ಸೋಂಕು ತಗಲಿದವರಿಗೆ ತೀವ್ರತೆ ಹೆಚ್ಚಿರುತ್ತದೆ. ನೇರವಾಗಿ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಆಕ್ಸಿಜನ್ ಮತ್ತು ವೆಂಟಿಲೇಟರ್ ಅಗತ್ಯವಿರುತ್ತದೆ.
– ದೇಹದಲ್ಲಿ ಕೊರೊನಾ ಲಸಿಕೆಯ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮ
– ಡೆಲ್ಟಾ ಪ್ಲಸ್ ದೃಢಪಟ್ಟವರ ಸಂಪರ್ಕಿತರನ್ನು ಶೀಘ್ರ ಪತ್ತೆ ಮಾಡಿ ಪರೀಕ್ಷೆ ನಡೆಸಬೇಕು. ಕಡ್ಡಾಯ ಕ್ವಾರಂಟೈನ್ ಮಾಡಬೇಕು.
– ವೈರಸ್ ವಂಶವಾಹಿ ಪತ್ತೆಗೆ ನಡೆಸುವ ಪರೀಕ್ಷೆಯನ್ನು ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಆರಂಭಿಸಬೇಕು.
– ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸಬೇಕು. – ಜಯಪ್ರಕಾಶ್ ಬಿರಾದಾರ್