Advertisement

38 ದಿವ್ಯಾಂಗರಿಗೆ ತ್ರಿಚಕ್ರ ವಾಹನ ವಿತರಣೆ

12:40 PM Jul 23, 2018 | |

ಹುಣಸೂರು: ತಾಲೂಕಿನ 38 ಮಂದಿ ದಿವ್ಯಾಂಗರಿಗೆ(ವಿಕಲಚೇತನ) ಒಟ್ಟು 30.40 ಲಕ್ಷರೂ ವೆಚ್ಚದಡಿ ತ್ರಿಚಕ್ರವಾಹನಗಳನ್ನು ಶಾಸಕ ಎಚ್‌.ವಿಶ್ವನಾಥ್‌ ವಿತರಿಸಿದರು.

Advertisement

ತಾಪಂ ಆವರಣದಲ್ಲಿ ಜಿಲ್ಲಾ ಅಂಗವಿಲಕರ ಕಲ್ಯಾಣಾ ಧಿಕಾರಿ ಕಚೇರಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ  ನೀಡುವ ವಾಹನಗಳನ್ನು ವಿತರಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ವಿಕಲಚೇತನರನ್ನು ದಿವ್ಯಾಂಗರೆಂದು ಕರೆಯುವ ಮೂಲಕ ಕಾಳಜಿತೋರಿರುವುದು ಹೆಮ್ಮೆಯ ವಿಚಾರ.

ತಾವು ಸಂಸದರಾಗಿದ್ದ ವೇಳೆ ಸಂಸದರ ನಿಧಿ ಯಿಂದ ಈ ವರ್ಗದವರಿಗೆ ಯಾವುದೇ ಸವಲತ್ತು ವಿತರಿಸಲು ಅವಕಾಶವಿರಲಿಲ್ಲ, ಇದನ್ನು ಮನಗಂಡ ತಾವು ಹಿರಿಯ ಸಚಿವರಾಗಿದ್ದ ಆಸ್ಕರ್‌ ಫರ್ನಾಂಡಿಸ್‌ರ ಗಮನಕ್ಕೆ ತಂದ ವೇಳೆ ದಿವ್ಯಾಂಗರಿಗೂ ಸಂಸದರ ನಿಧಿ ಯಿಂದ ಸವಲತ್ತು

ಕಲ್ಪಿಸುವ ಅವಕಾಶ ನೀಡಿದ್ದರಿಂದಾಗಿ ಅಂದು ಮೈಸೂರು ಜಿಲ್ಲೆಯ 85 ಹಾಗೂ ಕೊಡಗಿನ 80ಕ್ಕೂ ಹೆಚ್ಚು ಮಂದಿಗೆ ಸವಲತ್ತು ವಿತರಿಸಲಾಗಿತ್ತು. 2016-17ನೇ ಸಾಲಿನಲ್ಲಿ ಆಯ್ಕೆಯಾಗಿದ್ದ ಜಿಲ್ಲೆಯ 400ಕ್ಕೂ ಹೆಚ್ಚು ಮಂದಿಗೆ ಅವಕಾಶ ಸಿಕ್ಕಿದ್ದರೆ, ತಾಲೂಕಿನ 38 ಮಂದಿಗೆ ನೀಡಲಾಗುತ್ತಿದೆ ಎಂದರು. 

ರಾಜ್ಯದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸಹ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೋನ್‌ಮ್ಯಾರೋ ಕಾಯಿಲೆಗೊಳಗಾಗಿರುವವರ ಹೆಚ್ಚಿನ ಚಿಕಿತ್ಸೆಗಾಗಿ ಈ ಬಾರಿಯ ಬಜೆಟ್‌ನಲ್ಲಿ 12 ಕೋಟಿ ರೂ ಮೀಸಲಿರಿಸಿದ್ದಾರೆ.

Advertisement

ಎಲ್ಲರಿಗೂ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದಲ್ಲಿ ಕೈಗೊಂಡಿದ್ದ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸಿದ ನಂತರ ಶೀಘ್ರ ಜಾರಿಗೆ ತರಲಾಗುತ್ತಿದೆ ಎಂದರು.

ಜಿ.ಪಂ.ಸದಸ್ಯ ಎಂ.ಬಿ.ಸುರೇಂದ್ರ, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮಕುಮಾರ್‌, ಕಾರ್ಯ ನಿರ್ವಹಣಾಧಿ ಕಾರಿ ಕೃಷ್ಣಕುಮಾರ್‌, ನಗರಸಭೆ ಅಧ್ಯಕ್ಷ ಎಂ.ಶಿವಕುಮಾರ್‌, ಸದಸ್ಯ ಶಿವರಾಜು, ಸಿಡಿಪಿಓ ನವೀನ್‌ಕುಮಾರ್‌, ದಿವ್ಯಾಂಗರ ಕಲ್ಯಾಣಾ ಧಿಕಾರಿ ದೇವರಾಜ್‌ ಹಾಗೂ ಫಲಾನುಭವಿಗಳು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next