Advertisement

ರಾಜ್ಯದಲ್ಲಿ ಇಂದಿನಿಂದ ಮನೆಗೆ ಮದ್ಯ ವಿತರಣೆ

08:34 AM May 15, 2020 | mahesh |

ಮುಂಬಯಿ: ರಾಜ್ಯದಲ್ಲಿ ಮನೆಗೆ ಮದ್ಯದ ವಿತರಣೆ ಮೇ 15ರಿಂದ ಪ್ರಾರಂಭವಾಗಲಿದೆ ಎಂದು ರಾಜ್ಯ ಅಬಕಾರಿ ಇಲಾಖೆ ಹೇಳಿದೆ. ಕೋವಿಡ್ ವೈರಸ್‌ ಹಿನ್ನೆಲೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ ಮಧ್ಯೆ ಅಂಗಡಿಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ರಾಜ್ಯ ಸರಕಾರವು ಮಂಗಳವಾರ ಮನೆಗೆ ಮದ್ಯ ವಿತರಿಸಲು ಅನುಮತಿ ನೀಡಿತ್ತು.

Advertisement

ಆದರೆ, ಅಂಗಡಿ ಮಾಲಕರು ತಯಾರಿಗಾಗಿ ಇನ್ನೂ ಸ್ವಲ್ಪ ಸಮಯ ಕೋರಿರುವುದರಿಂದ ಶುಕ್ರವಾರದಿಂದ ಸೇವೆ ಪ್ರಾರಂಭವಾಗಲಿದೆ ಎಂದು ರಾಜ್ಯ ಅಬಕಾರಿ ಇಲಾಖೆ ಹೊರಡಿಸಿರುವ ಸರಕಾರಿ ಅಧಿಸೂಚನೆ (ಜಿಆರ್‌) ತಿಳಿಸಿದೆ. ರಾಜ್ಯಾದ್ಯಂತ ಕಂಟೈನ್‌ಮೆಂಟ್‌ ರಹಿತ ಪ್ರದೇಶಗಳಲ್ಲಿ ಶುಕ್ರವಾರದಿಂದ ಮದ್ಯ ವಿತರಣೆ ಪ್ರಾರಂಭವಾಗಲಿದೆ. ಓರ್ವ ಅಂಗಡಿ ಮಾಲಕನಿಗೆ 10ಕ್ಕಿಂತ ಹೆಚ್ಚು ವಿತರಣ ವ್ಯಕ್ತಿಗಳನ್ನು ನೇಮಿಸಲು ಅವಕಾಶವಿಲ್ಲ ಮತ್ತು ಒಬ್ಬ ವಿತರಣಾ ವ್ಯಕ್ತಿಯು ಒಂದು ಬಾರಿಗೆ 24 ಬಾಟಲಿಗಳಿಗಿಂತ ಹೆಚ್ಚು ಮದ್ಯವನ್ನು ಸಾಗಿಸುವಂತಿಲ್ಲ ಎಂದು ಆದೇಶವು ಹೇಳಿದೆ.

ಅಂತೆಯೇ, ಗ್ರಾಹಕರಿಗೆ ಪರಿಹಾರ ಒದಗಿಸುತ್ತ ಸರ ಕಾರವು ಬಾಟಲಿಯ ಮೇಲೆ ಮುದ್ರಿಸಲಾದ ಎಂಆರ್‌ಪಿಗಿಂತ ಹೆಚ್ಚಿನ ದರವನ್ನು ವಿಧಿಸಬಾರದು ಎಂದು ಮದ್ಯದಂಗಡಿಗಳಿಗೆ ಆದೇಶಿಸಿದೆ. ಆನ್‌ಲೈನ್‌ ಮದ್ಯ ಮಾರಾಟವು ಖರೀದಿದಾರ ಮತ್ತು ಮಾರಾಟಗಾರರ ನಡುವಿನ ಅಲಿಖೀತ ಒಪ್ಪಂದವಾಗಿದೆ, ಆದ್ದರಿಂದ ರಾಜ್ಯವು ಅವರ ನಡುವಿನ ಯಾವುದೇ ವಿವಾದಕ್ಕೆ ಕಾರಣವಾಗುವುದಿಲ್ಲ ಎಂದು ಜಿಆರ್‌ ಸ್ಪಷ್ಟಪಡಿಸಿದೆ. ಆನ್‌ಲೈನ್‌ ಮಾರಾಟದ ಹೊರತಾಗಿಯೂ, ಮದ್ಯದಂಗಡಿಗಳು ಅದರ ಸಿಬಂದಿಗಳ ದೈಹಿಕ ಅಂತರ ಮತ್ತು ನೈರ್ಮಲಿಕರಣದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಲಾಕೌxನ್‌ ಮಾನದಂಡಗಳು ಸಡಿಲಗೊಂಡ ಅನಂತರ ಕಳೆದ ವಾರದ ಆರಂಭದಲ್ಲಿ ಮದ್ಯದಂಗಡಿಗಳು ತೆರೆದಾಗ ಅವುಗಳ ಹೊರಗೆ ಭಾರಿ ಜನಸಂದಣಿ ಕಂಡುಬಂದ ಹಿನ್ನೆಲೆಯಲ್ಲಿ ಸರಕಾರವು ಮದ್ಯವನ್ನು ಮನೆಗೆ ತಲುಪಿಸಲು ಅನುಮತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next