ಮುಂಬಯಿ: ಸೆಲೆಬ್ರಿಟಿಗಳೊಂದಿಗೆ ಸೆಲ್ಫಿ ತೆಗೆಯಲು ಕೆಲ ಅಭಿಮಾನಿಗಳು ಮುಗಿಬೀಳುತ್ತಾರೆ. ತಮ್ಮ ಮೆಚ್ಚಿನ ಸ್ಟಾರ್ಸ್ ಗಳೊಂದಿಗೆ ಒಂದು ಫೋಟೋ ಸಿಕ್ಕರೆ ಅಭಿಮಾನಿಗಳಿಗೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದು ಇಲ್ಲ. ಆದರೆ ಕೆಲವೊಮ್ಮೆ ಸ್ಟಾರ್ಸ್ ಗಳಿಗಿಂತ ಅವರ ಪಕ್ಕದಲ್ಲಿರುವ ಅಂಗ ರಕ್ಷಕರೇ ದರ್ಪ ತೋರಿಸುದುಂಟು.
ಇತ್ತೀಚೆಗೆ ನಟ ಹೃತಿಕ್ ರೋಷನ್ ತಮ್ಮ ಮಾಜಿ ಪತ್ನಿ ಸುಸ್ಸಾನೆ ಖಾನ್ ಮತ್ತು ಆಕೆಯ ಗೆಳೆಯ ಅರ್ಸಾಲನ್ ಗೋನಿ ಅವರೊಂದಿಗೆ ಡಿನ್ನರ್ ಡೇಟ್‌ಗೆ ತೆರಳಿದ್ದರು. ಸುಸ್ಸಾನೆ ಖಾನ್ ಅವರ ಸಹೋದರ ಜಾಯೆದ್ ಖಾನ್ ಕೂಡ ಅವರೊಂದಿಗೆ ಸೇರಿಕೊಂಡಿದ್ದರು. ಇದೇ ವೇಳೆ ಡೆಲಿವೆರಿ ಹುಡುಗನೊಬ್ಬ ಫೋಟೋ ತೆಗೆದುಕೊಳ್ಳಲು ಬಂದಿದ್ದಾರೆ. ಈ ವೇಳೆ ಹೃತಿಕ್ ಅಭಿಮಾನಿ ಮೇಲೆ ಬಾಡಿಗಾರ್ಡ್ ತೋರಿಸಿರುವ ದರ್ಪದ ವರ್ತನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೃತಿಕ್ ರೋಷನ್ ರೆಸ್ಟೋರೆಂಟ್ ಪಕ್ಕದಲ್ಲಿ ನಿಂತಿದ್ದಾರೆ. ಇದೇ ವೇಳೆ ಡೆಲಿವೆರಿ ಹುಡುಗನೊಬ್ಬ ಅಭಿಮಾನದಿಂದ ಫೋಟೋ ಕ್ಲಿಕ್ಕಿಸಲು ಬಂದಿದ್ದಾರೆ. ಇದಕ್ಕೆ ಹೃತಿಕ್ ಅವರು ಕೂಡ ಪೋಸ್ ಕೊಟ್ಟಿದ್ದಾರೆ. ಆದರೆ ಅಲ್ಲೇ ಪಕ್ಕದಲ್ಲಿದ್ದ ಹೃತಿಕ್ ಬಾಡಿಗಾರ್ಡ್ ಬಂದು ಹುಡುಗನನ್ನು ಒಂದು ಕೈಯಿಂದ ದೂಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಾಡಗಾರ್ಡ್ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮಿಂದ ಇವರೆಲ್ಲ ಇದ್ದಾರೆ. ಆ ಪಾಪದ ಹುಡುನನ್ನು ದೂಡಿದ್ದಾನೆ. ಅವರನ್ನು ಅವರು ಏನು ಅಂದುಕೊಂಡಿದ್ದಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇದೊಂದು ಅಸಂಬದ್ದ ವರ್ತನೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಹೃತಿಕ್ ರೋಷನ್ ಮುಂದೆ ʼಫೈಟರ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅವರು ಏರ್‌ಫೋರ್ಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಸದ್ಯ ಚಿತ್ರೀಕರಣ ನಡೆಯುತ್ತಿದೆ.