Advertisement

ಗ್ರಾಹಕರ ಬರ್ಗರ‌ನ್ನೇ ಸ್ವಾಹಾ ಮಾಡಿದ ಡೆಲಿವರಿ ಬಾಯ್‌!

08:40 PM Jan 21, 2021 | Team Udayavani |

ಲಂಡನ್‌: ಹಸಿವಿನಿಂದ ಕಂಗಾಲಾಗಿದ್ದ ಮಹಿಳೆಯೊಬ್ಬರು ಮೆಕ್‌ ಡೊನಾಲ್ಡ್ಸ್ ನಿಂದ ಬರ್ಗರ್‌ ಆರ್ಡರ್‌ ಮಾಡಿದಾಗ ಅವರಿಗೆ ಸಿಕ್ಕಿದ್ದು ನಿರಾಸೆಯಷ್ಟೆ!

Advertisement

ಏಕೆಂದರೆ, ಡೆಲಿವರಿ ಬಾಯ್‌, ಆ ಆರ್ಡರ್‌ ಅನ್ನು ಕ್ಯಾನ್ಸಲ್‌ ಮಾಡಿ, ಆಕೆಯ ಮನೆಯ ಮುಂದೇ ಕುಳಿತು ಬರ್ಗರ್‌ ತಿಂದು ಖಾಲಿ ಮಾಡಿದ್ದಾನೆ!

ಈ ದೃಶ್ಯವನ್ನು ಮಹಿಳೆಯ ಸಹೋದರ ಸೆರೆ ಹಿಡಿದಿದ್ದು, ಇದೀಗ ವೈರಲ್‌ ಆಗಿದೆ. ಈ ಆಹಾರವನ್ನು ಡೆಲಿವರಿ ಮಾಡುವ ಹೊಣೆಹೊತ್ತ ಜಸ್ಟ್‌ ಈಟ್‌ ಕಂಪನಿಯು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಘಟನೆಯ ಬಗ್ಗೆ ತನಿಖೆ ನಡೆದಿರುವುದಾಗಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಅಲ್ಲದೇ, ಆರ್ಡರ್‌ ಮಾಡಿದ್ದ ಮಹಿಳೆ ಬಳಿ ಕ್ಷಮೆಯಾಚಿಸಿದೆ.

ಇದನ್ನೂ ಓದಿ:ಮನಕಲಕುವ ಘಟನೆ: ಕಬಡ್ಡಿ … ಕಬಡ್ಡಿ… ಎನ್ನುತ್ತಲೇ ಪ್ರಾಣಬಿಟ್ಟ ಯುವಕ !

Advertisement

Udayavani is now on Telegram. Click here to join our channel and stay updated with the latest news.

Next