Advertisement

ಯೋಜನೆ ಅರ್ಹರಿಗೆ ತಲುಪಿಸಿ

10:30 AM Sep 22, 2019 | Suhan S |

ಬೈಲಹೊಂಗಲ: ಕೇಂದ್ರ, ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸೌಲಭ್ಯವನ್ನು ಪ್ರತಿಯೊಬ್ಬ ನಾಗರಿಕರಿಗೆ ಅಧಿಕಾರಿಗಳು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

Advertisement

ತಾಲೂಕಿನ ನೇಸರಗಿ ಗ್ರಾಮದ ಶಾಸಕರ ಕಚೇರಿಯಲ್ಲಿ ಶನಿವಾರ ನಡೆದ ಪಿಂಚಣಿ ಅದಾಲತ್‌, ನೇಸರಗಿ ಹೋಬಳಿಯ ತಾಲೂಕು ಮಟ್ಟದ ಅ ಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನಾಗರಿಕರು ಪರದಾಡುವಂತಾಗಿದೆ. ಸಾರ್ವಜನಿಕರ ಕೆಲಸಗಳಿಗೆ ತುರ್ತಾಗಿ ಅ ಧಿಕಾರಿಗಳು ಸ್ಪಂದನೆ ಮಾಡಬೇಕು. ತಾಲೂಕು ಅಧಿಕಾರಿಗಳು ಪ್ರತಿ ಸಿಬ್ಬಂದಿ ಕೆಲಸ ಮಾಡಿದ ದಿನಚರಿಯನ್ನು ಸಂಬಂಧಿಸಿದ ಶಾಸಕರು, ಜನಪ್ರತಿನಿ ಧಿಗಳಿಗೆ ಕಳುಹಿಸಿಕೊಡಬೇಕು.ಅಧಿಕಾರಿಗಳು ದಿನಚರಿ ಮಾಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಕೆಲಸದಲ್ಲಿ ಗೈರು ಇದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ನೇಸರಗಿ ಸರಕಾರಿ ಐಟಿಐ ಕಾಲೇಜು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಕಚೇರಿ ಕಟ್ಟಡವನ್ನು ಎಪಿಎಂಸಿ ಪ್ರಾಂಗಣದಲ್ಲಿ ಬೇಗ ಗ್ರಾಮದಲ್ಲಿ ಪ್ರಾರಂಭಿಸಬೇಕು. ಶಾಸಕರು ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರು ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ಪಿಂಚಣಿ ಅದಾಲತ್‌ನಲ್ಲಿ ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಜಿಪಂ ಸದಸ್ಯ ನಿಂಗಪ್ಪ ತಳವಾರ, ತಹಶೀಲ್ದಾರ್‌ ಡಾ| ದೊಡ್ಡಪ್ಪ ಹೂಗಾರ, ತಾಪಂ ಕಾರ್ಯನಿರ್ವಾಹಕ ಅಧಿ ಕಾರಿ ಸಮೀರ್‌ ಮುಲ್ಲಾ, ಬಿಇಒ ಪಾರ್ವತಿ ವಸ್ತ್ರದ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಭಾ ಹೂಗಾರ, ತಾಪಂ ಉಪಾಧ್ಯಕ್ಷ ಮಲ್ಲನಾಯ್ಕ ಬಾಂವಿ, ತಾಪಂ ಸದಸ್ಯ ಶ್ರೀಶೈಲ ಕಮತಗಿ, ತಾಪಂ ಎಡಿ ಸುಭಾಶ ಸಂಪಗಾಂವಿ, ಐಟಿಐ ಪ್ರಾಚಾರ್ಯ ಎನ್‌.ಎಂ. ದಾಸ್ತಿಕೊಪ್ಪ, ಗ್ರಾಪಂ ಅಧ್ಯಕ್ಷ ಸತಾರ ಮೋಕಾಶಿ, ಮುಖಂಡರಾದ ಕೆಂಚಪ್ಪ ಕಳ್ಳಿಬಡ್ಡಿ, ಬಾಳಪ್ಪ ಮಾಳಗಿ, ಡಾ| ಚನಗೌಡ ಪಾಟೀಲ, ಅಡಿವೆಪ್ಪ ಮಾಳನ್ನವರ,ಸೋಮಶೇಖರ ಮಾಳನ್ನವರ, ನಿಂಗಪ್ಪ ತಳವಾರ, ಸೋಮನಗೌಡ ಪಾಟೀಲ, ಪ್ರಕಾಶ ತೋಟಗಿ, ಮುಕಬುಲ್‌ ಬೇಪಾರಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next