Advertisement

ಕನಕದಾಸರ ಸಂದೇಶ ದೇಶಕ್ಕೆ ತಲುಪಿಸಿ

11:30 AM Nov 16, 2019 | Suhan S |

ಧಾರವಾಡ: ಕನಕದಾಸರು ಸೇರಿದಂತೆ ಅನೇಕ ಕನ್ನಡದ ಮಹಾನ್‌ ಸಂತ ಕವಿಗಳ ತತ್ವ, ಸಾಮಾಜಿಕ ನಿಲುವುಗಳನ್ನು ಇಡಿ ದೇಶಕ್ಕೆ ಎಲ್ಲ ಭಾಷೆಗಳಿಂದ ತಲುಪಿಸಬೇಕಾಗಿದೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ|ಶ್ರೀರಾಮ ಇಟ್ಟಣ್ಣವರ ಹೇಳಿದರು. ಕವಿವಿ ಕನಕ ಅಧ್ಯಯನ ಪೀಠವು ಕನಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ 532ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಕನಕದಾಸರ ಕೀರ್ತನೆ, ಕಾವ್ಯ ಮತ್ತು ಸಾಹಿತ್ಯವು ವೈಚಾರಿಕ ಚಿಂತನೆ, ಸಾಮಾಜಿಕ ನಿಲುವುಗಳನ್ನು ಹೊಂದಿದೆ. ಕೆಳಸ್ತರದ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಕನಕದಾಸರ ಸಾಹಿತ್ಯ ಇಂದಿಗೂ ಪ್ರಸ್ತುತ. ಕನಕದಾಸರು ತಳವರ್ಗದ ಪ್ರತಿನಿಧಿಯಾಗಿ ಬಿಂಬಿತವಾಗಿದ್ದು, ಇಂದು ಅವರ ಕೀರ್ತನೆ, ಕಾವ್ಯ, ಸಾಹಿತ್ಯ ಎಲ್ಲವೂ ಪ್ರಸ್ತುತವಾಗಿದೆ ಎಂದರು.

ಕನಕ ಅಧ್ಯಯನ ಪೀಠದಿಂದ ಹೊರತಂದ ಡಾ| ಪಿ.ಆರ್‌. ಪಂಚಮುಖೀ ಬರೆದಿರುವ “ತತ್ವ ವೇದ ಬೇಸ್ಡ್ ಇನ್‌ ದಾಸ್‌ ಸಾಹಿತ್ಯ ವಿಥ್‌ ಅ ಫೋಕಸ್ ಆನ್‌ ದಿ ಕಾಂಟ್ರಾಬ್ಯುಶನ್‌ ಆಫ್‌ ಕನಕದಾಸ’, ಡಾ| ಚಂದ್ರಶೇಕರ ರೊಟ್ಟಿಗವಾಡ ರಚಿತ “ದಾಸ ಪರಂಪರೆ ಮತ್ತು ಕನಕದಾಸರು’, ಡಾ| ಕೆ.ಕೇಶವಶರ್ಮ ಬರೆದಿರುವ “ಕಾವ್ಯತತ್ವಗಳು ಮತ್ತು ಕನಕರ ಕಾವ್ಯ’ ಹಾಗೂ ಡಾ| ಬಸು ಬೇವಿನಗಿಡದ ರಚಿಸಿದ “ಕನಕದಾಸರು ಮತ್ತು ಮಧುರ ಚೆನ್ನರು’ ಪುಸ್ತಕಗಳನ್ನು ಕವಿವಿ ಪ್ರಭಾರ ಕುಲಪತಿ ಪ್ರೊ| ಎ.ಎಸ್‌. ಶಿರಾಳಶೆಟ್ಟಿ ಲೋಕಾರ್ಪಣೆಗೊಳಿಸಿದರು.

ಕನಕ ಅಧ್ಯಯನ ಪೀಠದ ಸಂಯೋಜಕ ಡಾ| ಬಿ.ವಿ. ಯಕ್ಕುಂಡಿಮಠ ಮಾತನಾಡಿದರು. ಕವಿವಿ ಪ್ರಭಾರ ಕುಲಪತಿ ಪ್ರೊ|ಎ.ಎಸ್‌. ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಸಿ.ಬಿ. ಹೊನ್ನು ಸಿದ್ಧಾರ್ಥ, ಪ್ರೊ| ಎನ್‌. ಎಂ. ಸಾಲಿ, ಪ್ರೊ| ಮಲ್ಲಿಕಾರ್ಜುನ ಪಾಟೀಲ, ಪ್ರೊ| ಜಿ.ಎಂ. ಹೆಗಡೆ, ಡಾ| ಎಸ್‌.ಟಿ. ಬಾಗಲಕೋಟಿ, ಡಾ| ಬಿ.ವಿ. ಯಕ್ಕುಂಡಿಮಠ, ಡಾ| ಸುಭಾಶಚಂದ್ರ ನಾಟೀಕರ, ಡಾ| ಸಿ.ಎಂ. ಕುಂದಗೋಳ, ಡಾ| ಧನವಂತ ಹಾಜವಗೋಳ, ಡಾ| ರುದ್ರೇಶ ಮೇಟಿ, ಡಾ| ವಿಶ್ವನಾಥ ಚಿಂತಾಮಣಿ, ಪ್ರೊ| ವೇದಮೂರ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next