Advertisement

ವೈದ್ಯಕೀಯ ಸೇವೆ ಮನೆ ಬಾಗಿಲಿಗೆ ತಲುಪಿಸಿ

09:33 AM Mar 19, 2019 | Team Udayavani |

ಬೆಳಗಾವಿ: ಸೇವಾ ಮನೋಭಾವದಿಂದ ಮಾನವೀಯತೆಯನ್ನು ಮೆರೆಯಬೇಕು ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್‌ ಆಸ್ಪತ್ರೆಯ ನಿರ್ದೇಶಕ ಡಾ|ಎಸ್‌.ಸಿ. ಧಾರವಾಡ ಹೇಳಿದರು.

Advertisement

ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್‌ ಆಸ್ಪತ್ರೆಯಲ್ಲಿ ನಡೆದ ಹೋಮ್‌ ನರ್ಸಿಂಗ್‌ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಿರಿಯ ನಾಗರಿಕರಿಗೆ, ಒಬ್ಬಂಟಿ ಜೀವನ ನಡೆಸುವವರಿಗೆ ವೈದ್ಯಕೀಯ ಸೇವೆ‌ಗಳು ಸಿಗುವುದು ಕೇವಲ ಆಸ್ಪತ್ರೆಗಳಲ್ಲಿ ಎಂಬ ಕಲ್ಪನೆ ನಮ್ಮ ಜನರಲ್ಲಿದೆ. ಅದನ್ನು ಹೊರಹಾಕಲು ಹಾಗೂ ವೈದ್ಯಕೀಯ ಸೇವೆಗಳು ಮನೆಬಾಗಿಲಿಗೆ ತಲುಪಬೇಕು ಎಂಬ ಸದುದ್ದೇಶದಿಂದ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ| ಹೆಚ್‌.ಬಿ. ರಾಜಶೇಖರ ಮಾತನಾಡಿ, ಆಸ್ಪತ್ರೆಯ ಪರಿಸರದಲ್ಲಿ ದಾದಿಯರು ಸೇವೆಸಲ್ಲಿಸುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಸೇವೆ ಪಡೆಯಲು ಸಾಧ್ಯವಾಗದ ಜನರಿಗೆ ಸೇವೆ ನೀಡಲು ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಇದು ನಿಮಗೆ ಉದ್ಯೋಗವನ್ನಷ್ಟೇ ಅಲ್ಲದೇ ಸಮಾಜಕ್ಕೆ ಮಾದರಿ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದರು. ಬೆಳಗಾವಿ ಜಿಲ್ಲಾ ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಪ್ರಭಾಕರ ಕುಲಕರ್ಣಿ ಹಾಗೂ ಕೆಎಲ್‌ಇ ಹೋಮಿಯೊಪಥಿಕ್‌ ಪ್ರಾಂಶುಪಾಲ ಡಾ| ಎಂ.ಎ. ಉಡಚನಕರ ಮಾತನಾಡಿ, ಮಾನವೀಯತೆ, ಸೃಜನಶೀಲತೆ, ತ್ಯಾಗ, ಸೇವಾ ಮನೋಭಾವದ ಅಗತ್ಯತೆ ಇದೆ ಎಂದರು.

ಹಿರಿಯ ತಜ್ಞ ಡಾ| ಸಿ.ಎನ್‌. ತುಗಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ನಗರಸೇವಕ ಸಂಜಯ ಸವ್ವಾಶೇರಿ, ಡಾ| ಬಿ.ಎಸ್‌. ಮಹಾಂತಶೆಟ್ಟಿ, ಮಾಜಿ ನಗರ ಸೇವಕ ಮನೋಹರ ಹಲಗೇಕರ, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ಡಾ| ಸತೀಶ ಧಾಮನಕರ, ನರ್ಸಿಂಗ್‌ ಅಧೀಕ್ಷಕಿ ವಾಗಮಾರೆ ಉಪಸ್ಥಿತರಿದ್ದರು. ಸಂತೋಷ ಇತಾಪೆ ನಿರೂಪಿಸಿದರು. ಮಂಜುಳಾ ಪಿಸೆ ಸ್ವಾಗತಿಸಿದರು. ಸುರೇಖಾ ಚಿಕ್ಕೋಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next