Advertisement

ಮನೆಮನೆಗೆ ಸರ್ಕಾರಗಳ ಯೋಜನೆ ತಲುಪಿಸಿ

05:58 PM Aug 10, 2021 | Team Udayavani |

ತುಮಕೂರು: ಕೇಂದ್ರ -ರಾಜ್ಯ ಸರ್ಕಾರಗಳು ನೀಡಿರುವ ಜನಪರ, ರೈತಪರ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸುವಲ್ಲಿ
ಕಾರ್ಯೋನ್ಮುಖರಾಗುವ ಮೂಲಕ ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್‌.ಶಿವಪ್ರಸಾದ್‌ ತಿಳಿಸಿದರು.

Advertisement

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾವತಿಯಿಂದಸೋಮವಾರಹಮ್ಮಿಕೊಂಡಿದ್ದ 2ನೇ ಜಿಲ್ಲಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಶೇ.50 ಮಂದಿ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಇನ್ನುಳಿದ ಶೇ.50 ಮಂದಿಯೂ ಕೃಷಿಯನ್ನು ಅವಲಂಬಿಸಲೇಬೇಕು.

ಇಂದು ಶೇ.50ರಷ್ಟಿರುವ ಕೃಷಿ ಒಟ್ಟಾರೆ ನಮ್ಮ ಜಿಡಿಪಿಯಲ್ಲಿ ಕೃಷಿಯ ಪಾಲು2013-14ರಲ್ಲಿ ಕೇವಲ ಶೇ.14 ರಷ್ಟಿತ್ತು, ಶೇ.50 ಕೃಷಿ ಆಧಾರಿತವಾಗಿರುವ ದೇಶದಲ್ಲಿ ಒಟ್ಟಾರೆ ಜಿಡಿಪಿಯ ಪಾಲು ಕೇವಲ 14ರಷ್ಟಿತ್ತು. ಈಗ ಶೇ.20.20 ಆಗಿದ್ದು, 7 ವರ್ಷಗಳಲ್ಲಿಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಕೊಟ್ಟಂತಹ ಜನಪರ, ರೈತಪರ ಯೋಜನೆಗಳಿಂದ ಶೇ.6ರಷ್ಟು ಜಿಡಿಪಿ ಹೆಚ್ಚಳವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಅರ್ಥೈಸಿಕೊಳ್ಳುತ್ತಿಲ್ಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನೇಕ ಸಂದರ್ಭಗಳಲ್ಲಿ ಮಸೂದೆಗಳು ತಿದ್ದುಪಡಿಯಾಗಿವೆ. ಅಂತಿಮವಾಗಿ ಬಹುಮತದ ಆಧಾರದ ಮೇಲೆ ಜನರ ಹಿತ ಅರ್ಥಮಾಡಿಕೊಂಡು ಆಡಳಿತ ಮತ್ತು ಪ್ರತಿಪಕ್ಷಗಳ ಜತೆ ಸಮಾಲೋಚನೆ ನಡೆಸಿ ಕಾರ್ಯರೂಪಕ್ಕೆ ತಂದಂತಹ ಸಂದರ್ಭದಲ್ಲಿ ಅದನ್ನು ಕಾಂಗ್ರೆಸ್‌ ಅರ್ಥೈಸಿಕೊಳ್ಳಲಾಗದೆ ಕೇವಲ ರಾಜಕೀಯದ ಹುನ್ನಾರ, ಷಡ್ಯಂತ್ರ ಮಾಡುತ್ತಾ ತಮ್ಮ
ಪಕ್ಷದ ಅಸ್ಥಿತ್ವನ್ನು ಉಳಿಸುಕೊಳ್ಳುವುದಕ್ಕೋಸ್ಕರ ದೇಶದ ದಿಕ್ಕನ್ನೇ ಬದಲಾವಣೆ ಮಾಡುವಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೈತರ ಖಾತೆಗೆ ಹಣ ಜಮೆ ಆಗಿದೆ: ಕೇಂದ್ರದ ಅನೇಕ ಜನಪರ ಯೋಜನೆಗಳಲ್ಲಿ ರೈತಪರ ಯೋಜನೆಯಾದ ಕಿಸಾನ್‌ ಸಮ್ಮಾನ್‌ ಯೋಜನೆ ಅತ್ಯಂತ ಮಹತ್ವ ಪಡೆದಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದೆಯೇ 2018ರಲ್ಲಿ ಕಿಸಾನ್‌ ಸಮ್ಮಾನ್‌ ಯೋಜನೆಯ ಮೊದಲನೇ ಕಂತು
ರೈತರ ಬ್ಯಾಂಕ್‌ ಖಾತೆಗಳಿಗೆ 2000 ರೂ. ನೇರವಾಗಿ ಜಮೆ ಮಾಡಲಾಗಿದೆ. ದೇಶದ 9.5 ಕೋಟಿ ರೈತರಿಗೆ 19 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡುವ ಕೆಲಸವಾಗಿದೆ. ಇದುವರೆಗೂ 9 ಕಂತು ಸೇರಿ 1 ಲಕ್ಷ 72 ಸಾವಿರ ಕೋಟಿ ರೂ. ರೈತರ ಖಾತೆಗೆ
ಜಮೆ ಆಗಿದೆ ಎಂದು ತಿಳಿಸಿದರು.

Advertisement

ದಾವಣಗೆರೆ ವಿಭಾಗದ ಬಿಜೆಪಿ ಸಹ ಪ್ರಭಾರಿ ಲಕ್ಷ್ಮೀಶ್‌ ಮಾತನಾಡಿ, ಬಿಜೆಪಿಯ ಎಲ್ಲಾ ವಿಭಾಗಗಳಿಗಿಂತಲೂ ರೈತ ಮೋರ್ಚಾ ಹೆಚ್ಚು ಮಹತ್ವ ಪಡೆದುಕೊಂಡಿದೆ. ರೈತಮೋರ್ಚಾಕ್ಕೆ ಯಾವುದೇ ಜಾತಿ, ಲಿಂಗ ಬೇಧವಿಲ್ಲ ಎಂದರು.

ಇದನ್ನೂ ಓದಿ:ರಾಜ್ಯದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಬಿ.ಸಿ.ಪಾಟೀಲ್ ಮನವಿ

ಶಿಷ್ಯ ವೇತನ ಸಹಕಾರಿ: ಬಸವರಾಜ್‌ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಯೋಜನೆ ಜಾರಿಗೆ ತಂದಿದ್ದು, ಬಿಜೆಪಿ ರೈತ ಮಂಡಲಗಳು ತಂಡ ಮಾಡಿಕೊಂಡು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರ ಜತೆ ಚರ್ಚೆ ನಡೆಸಿ ರೈತ ಮಕ್ಕಳಿಗೆ ಯೋಜನೆ ತಲುಪುವಂತೆ ನೋಡಿಕೊಳ್ಳ ಬೇಕು ಎಂದರು. ಕಾರ್ಯಕಾರಣಿ ಸಭೆಯಲ್ಲಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಶಿವಶಂಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ್‌, ಜಿಲ್ಲಾ ಉಪಾಧ್ಯಕ್ಷರಾದ ಕೆ.ಕೆ.ರಮೇಶ್‌, ತರಕಾರಿ ಮಹೇಶ್‌, ನಗರ ರೈತಮೋರ್ಚಾ ಅಧ್ಯಕ್ಷ ಸತ್ಯಮಂಗಲ ಜಗದೀಶ್‌, ಜಿಲ್ಲಾ ಉಪಾಧ್ಯಕ್ಷ ಬಸವರಾಜ್‌, ರೈತಮೋರ್ಚಾ ಪದಾಧಿಕಾರಿಗಳು, ರೈತರು ಇದ್ದರು.

ಕೇಂದ್ರ ದಿಂದ ಐತಿಹಾಸಿಕ ನಿರ್ಣಯ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತಪರ ಕೃಷಿ ಮಸೂದೆಗಳಿಂದ ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಬಹುದು ಎಂಬ ಸ್ವಾತಂತ್ರ್ಯ ಕೊಟ್ಟಿದೆ. ಈ ಐತಿಹಾಸಿಕ ನಿರ್ಣಯದ ವಿರುದ್ಧ ಅನವಶ್ಯಕವಾಗಿ ರೈತರಲ್ಲಿ ಗೊಂದಲ ಮೂಡಿಸುತ್ತಾ,ಕಲಾಪ ನಡೆಯುವುದಕ್ಕೆ ಅಡಚಣೆ ಉಂಟು ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನಕಾರ್ಯದರ್ಶಿ ಎಸ್‌. ಶಿವಪ್ರಸಾದ್‌ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next