Advertisement

ಸರ್ಕಾರಿ ಯೋಜನೆ ಜನರಿಗೆ ತಲುಪಿಸಿ: ಜಾಧವ

05:17 PM Aug 25, 2020 | Suhan S |

ಕಾಳಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಸಂಸದ ಡಾ| ಉಮೇಶ ಜಾಧವ ಹೇಳಿದರು.

Advertisement

ಇಲ್ಲಿನ ಸಾಗರ ಮಹಲ್‌ನ ನೆಲ ಮಹಡಿಯಲ್ಲಿ ಭಾರತೀಯ ಜನತಾ ಪಕ್ಷದ ನೂತನ ತಾಲೂಕು ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕರ್ತರು ಪಕ್ಷದ ಕಾರ್ಯಾಲಯವನ್ನು ದಿನದ 24 ಗಂಟೆಯೂ ತೆರೆದಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಚಾರ ಮಾಡಿ ಜನರಿಗೆ ಮುಟ್ಟುವಂತೆ ಮಾಡಬೇಕು ಎಂದರು.

ನಂತರ ನಡೆದ ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಮಾಜದ ತಾಲೂಕು ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಸಂಸದರು, ದೇಶದ  ವಲಯದ ಕಾರ್ಮಿಕರೆಂದು ಗುರುತಿಸಿ ಹಡಪದ ಸಮಾಜಕ್ಕೆ ಅಗತ್ಯವಿರುವ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಚಿಕ್ಕಗುರುನಂಜೇಶ್ವರ ಸ್ವಾಮಿಗಳು, ಶಿವಬಸವ ಶಿವಾಚಾರ್ಯರು, ಶಾಸಕರಾದ ಬಿ.ಜಿ. ಪಾಟೀಲ, ಡಾ| ಅವಿನಾಶ ಜಾಧವ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ, ಸಂತೋಷ ಗಡಂತಿ, ರಾಮಚಂದ್ರ ಜಾಧವ, ಸಂತೋಷ ಪಾಟೀಲ ಮಂಗಲಗಿ, ಲಕ್ಷ್ಮಣ ಆವಂಟಿ, ಜಗದೀಶ ಪಾಟೀಲ, ಸುಧಾಕರ ಪಾಟೀಲ, ಚಂದ್ರಕಾಂತ ಜಾಧವ, ಪ್ರಶಾಂತ ಕದಂ, ರಮೇಶ ಕಿಟ್ಟದ, ತುಳಸಿರಾಮ ಕೋಡ್ಲಿ, ಈರಣ್ಣ ಸಣ್ಣೂರ, ಶ್ರೀಮಂತ ಮಳಗಿ ಇದ್ದರು. ರೇವಣಸಿದ್ದಪ್ಪ ಮೊಘ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next