Advertisement

ಫ‌ಲಾನುಭವಿಗೆ ಸಕಾಲದಲ್ಲಿ ಸೌಲಭ್ಯ ತಲುಪಿಸಿ

02:07 PM Jan 04, 2021 | Team Udayavani |

ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಕಡತಗಳನ್ನು ಬಾಕಿ ಇರಿಸಿಕೊಳ್ಳದೇ ತ್ವರಿತವಾಗಿ ವಿಲೇವಾರಿ ಮಾಡಿ ಕಾಲಮಿತಿ ಯೊಳಗೆ ಫ‌ಲಾನುಭವಿಗಳಿಗೆ ಸೌಲಭ್ಯತಲುಪುವಂತೆ ನೋಡಿಕೊಳ್ಳಬೇಕೆಂದು ಡಾ.ಎಂ.ಆರ್‌. ರವಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರ ಅಭಿವೃದ್ಧಿಗಾಗಿ ಪ್ರತಿ ಇಲಾಖೆಯಲ್ಲಿ ನಿಗದಿಯಾಗಿರುವ ಅನುದಾನ ನಿರ್ದಿಷ್ಟ ಅವಧಿಯೊಳಗೆ ವಿನಿಯೋಗವಾಗ ಬೇಕಿದೆ. ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮ ಜಾರಿ ಸಂಬಂಧ ಇರುವ ಯಾವುದೇ ಕಡತವನ್ನು ಅನಾವಶ್ಯಕವಾಗಿ ಇಟ್ಟುಕೊಳ್ಳದೇಕೂಡಲೇ ವಿಲೇವಾರಿ ಮಾಡಬೇಕು. ಸಂಬಂಧ ಪಟ್ಟ ಫ‌ಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಸಿಗಬೇಕು ಎಂದು ಸೂಚಿಸಿದರು.

ಕ್ರಿಯಾ ಯೋಜನೆ: ಕೆಲವು ಇಲಾಖೆಗಳು ನಿರೀಕ್ಷಿತ ಪ್ರಗತಿ ಸಾಧಿಸುವಲ್ಲಿ ಇನ್ನೂ ತ್ವರಿತವಾಗಿ ಮುಂದಾಗಬೇಕಿದೆ. ಈಗಾಗಲೇ ಜನವರಿ ತಿಂಗಳು ಆರಂಭವಾ ಗಿದೆ. ನಿಗದಿತ ಗುರಿ ಅನುಸಾರಆಯಾ ತಿಂಗಳಲ್ಲೇ ಕಾರ್ಯಕ್ರಮಗಳನ್ನುಅನುಷ್ಠಾನ ಮಾಡಲೇಬೇಕು. ಕ್ರಿಯಯೋಜನೆ ಅನುಮೋದನೆ ಪಡೆಯದಇಲಾಖೆಗಳು ತಕ್ಷಣವೇ ಅನುಮೋದ ನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಯೋಜನೆ ಅನುಷ್ಠಾನದಲ್ಲಿ ಯಾವುದೇ ತೊಡಕುಗಳಿದ್ದರೆ ಸಂಬಂಧಪಟ್ಟ ಇತರೆ ಇಲಾಖೆ ಅಥವಾ ಉನ್ನತ ಕೇಂದ್ರ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು. ಅನಗತ್ಯಸಬೂಬು ಕಾರಣದಿಂದ ಫ‌ಲಾನುಭವಿಗಳಿಗೆ ಸೌಲಭ್ಯ ತಲುಪಿಸದೇ ಇದ್ದಲ್ಲಿಗಂಭೀರ ಕ್ರಮಗಳಿಗೆ ಗುರಿಯಾಗಬೇಕಾಗು ತ್ತದೆ. ಯಾವುದೇ ಸಣ್ಣ ವಿಚಾರವನ್ನೂ ಸಹ ಅಲಕ್ಷ್ಯ ಮಾಡುವಂತಿಲ್ಲಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಸಹಾಯಧನ: ಬ್ಯಾಂಕುಗಳಿಂದ ಸಾಲ ಸಹಾಯಧನ ನೀಡುವ ಯೋಜನೆ ಕಾರ್ಯ ಕ್ರಗಳ ಬಗ್ಗೆ ಲೀಡ್‌ ಬ್ಯಾಂಕ್‌ವ್ಯವಸ್ಥಾಪಕರೊಂದಿಗೆ ಸಭೆ ನಡೆಸಬೇಕು. ಸಹಕಾರ ಸಮನ್ವಯದಿಂದ ಆಯಾಭಾಗದ ಬ್ಯಾಂಕುಗಳ ಮೂಲಕ ಫ‌ಲಾನು  ಭವಿಗಳಿಗೆ ಆರ್ಥಿಕ ನೆರವು ಸಿಗುವಂತೆನಿಗಾವಹಿಸಬೇಕು. ಕೈಗೊಂಡ ಕ್ರಮದಬಗ್ಗೆ ವರದಿ ಮಾಡಬೇಕೆಂದು ಅವರು ಸೂಚಿಸಿದರು.

Advertisement

ಸಮಾಜ ಕಲ್ಯಾಣ ಇಲಾಖೆ ಉಪ  ನಿರ್ದೇಶಕಿ ಭಾಗಿರಥಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಇಬ್ರಾಹಿಂ, ಲೋಕೋಪಯೋಗಿ ಕಾರ್ಯಪಾಲಕಎಂಜಿನಿಯರ್‌ ಸುರೇಂದ್ರ, ಮಹಿಳಮತ್ತು ಮಕ್ಕಳ ಕಲ್ಯಾಣ ಇಲಾಖೆಯಉಪನಿರ್ದೇಶಕ ಬಸವರಾಜು, ಕೃಷಿ ಜಂಟಿ ನಿರ್ದೇಶಕಿ ಚಂದ್ರಕಲಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಸಿ. ವೀರ  ಭದ್ರಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಉಪನಿರ್ದೇಶಕ ಜವರೇಗೌಡ,ತಾಲ್ಲೂಕು ಪಂಚಾಯತ್‌ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರಾಜು, ಪ್ರೇಮ್‌ಕುಮಾರ್‌ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next