Advertisement
ಡೆಲ್ಲಿ ಅಷ್ಟೇನೂ ಜನಪ್ರಿಯ ಹಾಗೂ ಸ್ಟಾರ್ ತಂಡವಲ್ಲ. ಭಾರೀ ಸಂಖ್ಯೆಯ ಅಭಿಮಾನಿಗಳನ್ನೂ ಹೊಂದಿಲ್ಲ. ಆದರೆ ಸತತ 4 ಸೋಲುಗಳ ಆಘಾತದ ನಡುವೆಯೂ ಅಂತಿಮ ಲೀಗ್ ಪಂದ್ಯದಲ್ಲಿ ಬಲಿಷ್ಠ ಆರ್‌ಸಿಬಿಯನ್ನು 6 ವಿಕೆಟ್‌ಗಳಿಂದ ಉರುಳಿಸಿದ ಖುಷಿಯಲ್ಲಿದೆ. ಇದರಿಂದ ಅದಕ್ಕೆ ದ್ವಿತೀಯ ಸ್ಥಾನದ ಅದೃಷ್ಟ ಒಲಿಯಿತು. ಇಲ್ಲಿಂದಾಚೆಯೂ ತಂಡಕ್ಕೆ ಲಕ್ ಇದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ!
ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಲೀಗ್ ಹಂತದ ಎರಡೂ ಪಂದ್ಯಗಳಲ್ಲಿ ಮುಂಬೈಗೆ ಶರಣಾಗಿತ್ತು. ಎರಡೂ ಸಂದರ್ಭಗಳಲ್ಲಿ ಅದು ಮೊದಲು ಬ್ಯಾಟಿಂಗ್ ನಡೆಸಿತ್ತು, ಮುಂಬೈ ಯಶಸ್ವಿಯಾಗಿ ರನ್ ಚೇಸ್ ಮಾಡಿತ್ತು. ಈ ಎರಡು ಸೋಲಿಗೆ ಕ್ವಾಲಿಫೈಯರ್‌ನಲ್ಲಿ ಸೇಡು ತೀರಿಸುವುದು ಡೆಲ್ಲಿಯ ಯೋಜನೆ. ಆದರೆ ಅಸ್ಥಿರ ಬ್ಯಾಟಿಂಗ್ ಮತ್ತು ಸೀಮಿತ ಸಾಮರ್ಥ್ಯದ ಬೌಲಿಂಗ್ ಡೆಲ್ಲಿ ಪಾಲಿನ ಚಿಂತೆಯ ಸಂಗತಿಯಾಗಿದೆ.
Related Articles
Advertisement
ಡೆಲ್ಲಿಯ ಬೌಲಿಂಗ್ ಆಫ್ರಿಕಾದ ವೇಗಿಗಳಾದ ಕಾಗಿಸೊ ರಬಾಡ, ಅನ್ರಿಚ್ ನೋರ್ಜೆ; ಭಾರತದ ಸ್ಪಿನ್‌ದ್ವಯರಾದ ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಅವರನ್ನು ಅವಲಂಬಿಸಿದೆ.
ಮುಂಬೈ ಹೆಚ್ಚು ಬಲಿಷ್ಠ4 ಬಾರಿಯ ಚಾಂಪಿಯನ್ ಮುಂಬೈ ಈ ಕೂಟದ ಅತ್ಯಂತ ಬಲಾಡ್ಯ ತಂಡ. ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್‌ರೌಂಡ್ ಸಾಮರ್ಥ್ಯದಲ್ಲಿ ಮುಂಬೈಯನ್ನು ಮೀರಿಸುವವರಿಲ್ಲ. ನಾಯಕ ರೋಹಿತ್ ಶರ್ಮ ಮರಳಿದ್ದರಿಂದ ತಂಡಕ್ಕೆ ಹೆಚ್ಚಿನ ಬಲ ಬಂದಿದೆ ನಿಜ, ಆದರೆ ರೋಹಿತ್ ಇಲ್ಲದೆಯೂ ಅದು ಗೆಲುವಿನ ರುಚಿ ಕಂಡಿದೆ. ಮಂಗಳವಾರ ಹೈದರಾಬಾದ್‌ಗೆ 10 ವಿಕೆಟ್‌ಗಳಿಂದ ಸೋತರೂ ಮುಂಬೈಯ ಕ್ವಾಲಿಫೈಯರ್ ಸ್ಪರ್ಧೆಯ ಗೇಮ್‌ಪ್ಲ್ರಾನ್ ಮಾತ್ರ ಬೇರೆಯೇ ಆಗಿರಲಿದೆ! ಲೀಗ್ ಸುತ್ತಿನಲ್ಲಿ ಮುಂಬೈ-ಡೆಲ್ಲಿ
1. ಮುಂಬೈಗೆ 5 ವಿಕೆಟ್ ಜಯ
2. ಮುಂಬೈಗೆ 9 ವಿಕೆಟ್ ಜಯ