Advertisement

ಅಯ್ಯೋ.. ಇಲ್ಲೂ ಉಸಿರಾಡೋಕಾಗ್ತಿಲ್ಲ..!

09:36 AM Nov 23, 2019 | Team Udayavani |

ಹೊಸದಿಲ್ಲಿ: ಮಾಲಿನ್ಯ ಪ್ರಮಾಣ ವಿಪರೀತವಾಗಿದ್ದು ದಿಲ್ಲಿಯಲ್ಲಿ ಉಸಿರಾಟವೇ ಕಷ್ಟ ಅನ್ನೋದು ಸುದ್ದಿ. ಆದರೆ, ಒಟ್ಟು ವಾಯುಗುಣಮಟ್ಟ ಸೂಚ್ಯಂಕದ ಪ್ರಕಾರ ಕೋಲ್ಕತಾ, ಮುಂಬಯಿಯಲ್ಲೂ ಇದೇ ಸ್ಥಿತಿ ಇದೆ.

Advertisement

ಜಗತ್ತಿನ ಟಾಪ್‌ 10 ಅತಿ ಮಾಲಿನ್ಯಯುಕ್ತ ನಗರಗಳ ಪೈಕಿ ಭಾರತದ ಮೂರು ನಗರಗಳಿವೆ. ಇವುಗಳಲ್ಲಿ ದಿಲ್ಲಿ, ಕರಾಚಿ, ಲಾಹೋರ್‌, ಮುಂಬಯಿ, ಕೋಲ್ಕತಾ, ಕಾಠ್ಮಂಡು ನಗರಗಳಿವೆ ಎಂದು ಸ್ಕೈಮೆಟ್‌ ಹವಾಮಾನ ಸಂಸ್ಥೆ ವರದಿ ಹೇಳಿದೆ.

ಸೂಚ್ಯಂಕದ ಪ್ರಕಾರ ಮುಂಬಯಿ 9ನೇ ಸ್ಥಾನವನ್ನು ಹೊಂದಿದ್ದು ಇಲ್ಲಿ ವಾಯುಮಾಲಿನ್ಯ ಮಟ್ಟ 153 ಇದೆ. ನೇಪಾಳದ ಕಾಠ್ಮಂಡುವಿನಲ್ಲಿ ವಾಯುಮಾಲಿನ್ಯ ಮಟ್ಟ 152 ಇದೆ. ಹಾಗೆಯೇ ಕೋಲ್ಕತಾದ ವಾಯುಮಾಲಿನ್ಯ ಮಟ್ಟ 161 ಇದ್ದು ಐದನೇ ಸ್ಥಾನವನ್ನು ಹೊಂದಿದೆ.

ಸದ್ಯ ಇಡೀ ವಿಶ್ವದಲ್ಲಿ ದಿಲ್ಲಿ ಅತಿ ಮಾಲಿನ್ಯಯುಕ್ತ ನಗರವೆಂದು ಹೆಸರಾಗಿದೆ. ಶುಕ್ರವಾರ ಇಲ್ಲಿನ ವಾಯುಗುಣಮಟ್ಟ 527 ಇತ್ತು. ಪಾಕಿಸ್ಥಾನದ ಲಾಹೋರ್‌ ಎರಡನೇ ಸ್ಥಾನದಲ್ಲಿದ್ದು ವಾಯು ಗುಣಮಟ್ಟ 234 ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next