Advertisement

ರಾಮ್ ರಹೀಮ್ ಸಿಂಗ್ ಗೆ ಪೆರೋಲ್ : ದೆಹಲಿ ಮಹಿಳಾ ಆಯೋಗ ಆಕ್ರೋಶ

09:38 AM Oct 27, 2022 | Team Udayavani |

ನವದೆಹಲಿ : ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಪೆರೋಲ್ ನೀಡಿದ್ದಕ್ಕಾಗಿ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಹರಿಯಾಣ ಸರಕರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ರಾಮ್ ರಹೀಮ್ ಪೆರೋಲ್ ವಾಪಸ್ ತೆಗೆದುಕೊಳ್ಳಿ. ರಾಮ್ ರಹೀಮ್ ಒಬ್ಬ ಅತ್ಯಾಚಾರಿ ಮತ್ತು ಕೊಲೆಗಾರ. ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು ಆದರೆ ಹರಿಯಾಣ ಸರ್ಕಾರವು ಅವರಿಗೆ ಬೇಕಾದಾಗ ಪೆರೋಲ್ ನೀಡುತ್ತದೆ. ಅವರು ಸತ್ಸಂಗವನ್ನು ಆಯೋಜಿಸುತ್ತಿದ್ದಾರೆ ಮತ್ತು ಹರಿಯಾಣ ಸರಕಾರದ ಉಪ ಸ್ಪೀಕರ್ ಮತ್ತು ಮೇಯರ್ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸ್ವಾತಿ ಮಲಿವಾಲ್ ಕಿಡಿ ಕಾರಿದ್ದಾರೆ.

ಜೈಲಿನ ನಿಯಮಗಳು ಎಲ್ಲಾ ಕೈದಿಗಳಿಗೆ ಅನ್ವಯಿಸುತ್ತವೆ

ರಹೀಮ್ ಸಿಂಗ್ ಅವರಿಗೆ ನೀಡಿರುವ ಪೆರೋಲ್ ಕುರಿತು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪ್ರತಿಕ್ರಿಯಿಸಿದ್ದು, ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಇದರಲ್ಲಿ ನನ್ನ ಪಾತ್ರವಿಲ್ಲ. ನ್ಯಾಯಾಲಯಗಳು ಜೈಲು ಶಿಕ್ಷೆಯನ್ನು ಘೋಷಿಸುತ್ತವೆ ಮತ್ತು ಅಪರಾಧಿ ಜೈಲಿಗೆ ಹೋಗುತ್ತಾನೆ. ಅದರ ನಂತರ, ಜೈಲಿನ ನಿಯಮಗಳು ಎಲ್ಲಾ ಕೈದಿಗಳಿಗೆ ಅನ್ವಯಿಸುತ್ತವೆ ”ಎಂದಿದ್ದಾರೆ.

ರುಹಾನಿ ದೀದಿ

Advertisement

ನಮ್ಮ ಮಗಳ ಹೆಸರು(ದತ್ತು ಮಗಳು) ಹನಿಪ್ರೀತ್. ಎಲ್ಲರೂ ಅವಳನ್ನು ‘ದೀದಿ’ ಎಂದು ಕರೆಯುವುದರಿಂದ ಗೊಂದಲವನ್ನು ಉಂಟುಮಾಡುತ್ತದೆ. ಆದ್ದರಿಂದ ನಾವು ಈಗ ಆಕೆಗೆ ‘ರುಹಾನಿ ದೀದಿ’ ಎಂದು ಹೆಸರಿಸಿದ್ದೇವೆ ಮತ್ತು ಅದನ್ನು ಸುಲಭವಾಗಿ ಉಚ್ಚರಿಸಲು ‘ರುಹ್ ದಿ’ ಎಂದು ಆಧುನೀಕರಿಸಿದ್ದೇವೆ ಎಂದು ಗುರ್ಮೀತ್ ರಾಮ್ ರಹೀಮ್ ಹೇಳಿದ್ದಾರೆ.

ಗುರ್ಮೀತ್ ರಾಮ್ ರಹೀಮ್ ಸಿಂಗ್ ಅಕ್ಟೋಬರ್ 14 ರಂದು ಹರಿಯಾಣದ ಸುನಾರಿಯಾ ಜೈಲಿನಿಂದ 40 ದಿನಗಳ ಪೆರೋಲ್‌ನಲ್ಲಿ ಬಿಡುಗಡೆಯಾಗಿದ್ದು, ಡೇರಾ ಇರುವ ಸಿರ್ಸಾದಲ್ಲಿರುವ ತನ್ನ ಆಶ್ರಮದಲ್ಲಿ ತನ್ನ ಇಬ್ಬರು ಮಹಿಳಾ ಶಿಷ್ಯರ ಮೇಲೆ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ರಹೀಮ್ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next