Advertisement

ಮೆಟ್ರೋ ರೈಲಿನ ಮುಂಭಾಗದಲ್ಲಿ ಹಾರಿ 25 ವರ್ಷದ ಮಹಿಳೆ ಆತ್ಮಹತ್ಯೆ

09:37 AM Aug 18, 2019 | Nagendra Trasi |

ನವದೆಹಲಿ:ವೇಗವಾಗಿ ಚಲಿಸುತ್ತಿದ್ದ ಮೆಟ್ರೋ ರೈಲಿನ ಮುಂಭಾಗ ಹಾರಿ 25 ವರ್ಷದ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ದೆಹಲಿ ಮೆಟ್ರೋದ ಹಳದಿ ಲೈನ್ ನ ಆದರ್ಶ್ ನಗರ್ ಮೆಟ್ರೋ ಸ್ಟೇಶನ್ ನಲ್ಲಿ ಈ ಘಟನೆ ಶುಕ್ರವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಅನಿತಾ ಎಂದು ಗುರುತಿಸಲಾಗಿದೆ.

ಮೆಟ್ರೋ ರೈಲು ಜಹಾಂಗೀರ್ ಪುರಿ ಸ್ಟೇಶನ್ ನಿಂದ ವಿಶ್ವವಿದ್ಯಾಲಯ ಸ್ಟೇಶನ್ ಗೆ ಆಗಮಿಸುತ್ತಿದ್ದ ವೇಳೆ ಆದರ್ಶ್ ನಗರ ಸ್ಟೇಶನ್ ಬಳಿ ಅನಿತಾ ಏಕಾಏಕಿ ರೈಲಿನ ಮುಂಭಾಗಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆಯಿಂದಾಗಿ ರೈಲು ಸಂಚಾರದಲ್ಲಿ ವಿಳಂಬವಾಯಿತು ಎಂದು ಡಿಎಂಆರ್ ಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅನಿತಾ ಜಹಾಂಗೀರ್ ಪುರಿ ನಿವಾಸಿಯಾಗಿದ್ದು, ಈಕೆ 2015ರಲ್ಲಿ ಧರ್ಮೇಂದ್ರ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ 3 ವರ್ಷದ ಮಗಳು ಹಾಗೂ 8 ತಿಂಗಳ ಹೆಣ್ಣು ಮಗು ಇದ್ದಿರುವುದಾಗಿ ವರದಿ ತಿಳಿಸಿದೆ. ಶವವನ್ನು ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ರವಾನಿಸಿದ್ದು, ಘಟನೆ ಬಗ್ಗೆ ಮೃತ ಅನಿತಾ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next