ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬಿಸಿಲಿನ ತಾಪ ತೀವ್ರವಾಗಿದ್ದು, ಬುಧವಾರ(ಜೂನ್ 30) ರಾಜಧಾನಿಯಲ್ಲಿ ಈ ವರ್ಷದ ದಾಖಲೆಯ ಅತೀ ಹೆಚ್ಚು ತಾಪಮಾನ ದಾಖಲಾಗಿತ್ತು ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಗುರುವಾರ (ಜುಲೈ01) ತಿಳಿಸಿದೆ.
ಇದನ್ನೂ ಓದಿ:ಆಸ್ಪತ್ರೆಗೆ ದಾಖಲಾದ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್
ಬಿಸಿಲ ತಾಪಮಾನ ಮುಂದುವರಿದಿರುವ ನಡುವೆಯೇ ವಾಯುವ್ಯ ಭಾರತದ ಪ್ರದೇಶಗಳಲ್ಲಿ ಜುಲೈ 7ರವರೆಗೂ ಮಾನ್ಸೂನ್ ಮಳೆ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದೆ. ದೆಹಲಿಯಲ್ಲಿ ಇಂದೂ ಕೂಡಾ ಬಿಸಿಲ ಗಾಳಿ ಮುಂದುವರಿದಿದ್ದು, ಇದರಿಂದ ಮಳೆಯ ಸಾಧ್ಯತೆ ಕಡಿಮೆಯಾಗಿದೆ.
ಬುಧವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 43.5 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಇದು ಈ ವರ್ಷ ದಾಖಲಾದ ಅತೀ ಗರಿಷ್ಠ ಉಷ್ಣಾಂಶವಾಗಿದೆ. ದೆಹಲಿಯಲ್ಲಿ ಜೂನ್ 20ರವರೆಗೆ ಬಿಸಿ ಗಾಳಿ ಬೀಸಲಿದ್ದು, ಅದರ ತಾಪಮಾನ ಕಡಿಮೆ ಇರುತ್ತಿತ್ತು. ಆದರೆ ಈ ವರ್ಷ ಜುಲೈನಲ್ಲಿಯೂ ಗರಿಷ್ಠ ತಾಪಮಾನ ಇರುವುದಾಗಿ ಐಎಂಡಿ ತಿಳಿಸಿದೆ.
ಸಫ್ದರ್ ಜಂಗ್ ವೀಕ್ಷಣಾಲಯದಲ್ಲಿ ಬುಧವಾರ ಗರಿಷ್ಠ ಪ್ರಮಾಣದ ತಾಪಮಾನ ದಾಖಲಾಗಿರುವುದಕ್ಕೆ ಸಾಕ್ಷಿಯಾಗಿರುವುದಾಗಿ ಐಎಂಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲೋಧಿ ರಸ್ತೆ 43.7 ಡಿಗ್ರಿ ಸೆಲ್ಸಿಯಸ್, ಆಯನಗರ್ 44.2 ಡಿಗ್ರಿ ಸೆಲ್ಸಿಯಸ್, ರಿಡ್ಜ್ 44 ಡಿಗ್ರಿ ಸೆಲ್ಸಿಯಸ್, ಮಂಗೇಶ್ ಪುರ್ 44.3 ಡಿಗ್ರಿ, ನಜಾಫ್ ಗಢ್ 44.4 ಡಿಗ್ರಿ, ಪೀತಾಂಪುರ್ 44.3 ಹಾಗೂ ನರೇಲಾದಲ್ಲಿ 43.7 ರಷ್ಟು ತಾಪಮಾನ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.