ನವ ದೆಹಲಿ : ಕೋವಿಡ್ ಸೋಂಕಿನ ಆತಂಕದ ನಡುವೆ ಹೆಚ್ಚಳವಾಗುತ್ತಿರುವ ಬ್ಲಾಕ್ ಫಂಗಸ್ ಕಾಯಿಲೆಯ ಬಗ್ಗೆ ಬೇಕಾದ ಎಲ್ಲಾಮುನ್ನೆಚ್ಚರಿಕಾ ಕ್ರಮಗಳನ್ನು ರಾಜ್ಯದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನೂ ಓದಿ : ಚರ್ಚೆ ಹುಟ್ಟುಹಾಕಿದೆ ಫೇಸ್ ಬುಕ್ ಪರಿಚಯಿಸಲು ಹೊರಟಿರುವ ಇನ್ಸ್ಟಾ ಗ್ರಾಂ ಫಾರ್ ಕಿಡ್ಸ್
ಕೋವಿಡ್ ಸೋಂಕಿತ ಕೆಲ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮ್ಯೂಕೋಮೈಕೋಸಿಸ್ ಅಂದರೆ ಬ್ಲ್ಯಾಕ್ ಫಂಗಸ್‌ನಿಂದಾಗಿ ದೃಷ್ಟಿ ಕಳೆದುಕೊಂಡಿರುವುದ ಬೆಳಕಿಗೆ ಬಂದಿದೆ. ಈ ಶಿಲೀಂಧ್ರ ಸಾಮಾನ್ಯವಾಗಿ ಮಣ್ಣು, ಗಿಡ, ಗೊಬ್ಬರ, ಕೊಳೆತ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹುಟ್ಟಿಕೊಳ್ಳುತ್ತದೆ. ಈ ಶಿಲೀಂಧ್ರ ಈಗ ಮನುಷ್ಯನಲ್ಲೂ ಕಾಣಿಸಿಕೊಳ್ಳುತ್ತಿದ್ದು, ಶ್ವಾಸಕೋಶ, ಮೂಗು, ಕಣ್ಣು, ಮೆದುಳುಗಳಿಗೆ ಹಾನಿಯನ್ನುಂಟು ಮಾಡುತ್ತಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತಿದ್ದು, ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. ಈ ಹಿನ್ನೆಲೆಯಲ್ಲಿ ದೆಹಲಿಯನ್ನು ಒಳಗೊಂಡು ಕೆಲವು ರಾಜ್ಯಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಂಡಿದೆ.
ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್ ಪ್ರಕರಣಕ್ಕೆ ದೆಹಲಿ ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು, ಮ್ಯೂಕೋರ್ಮೈಕೋಸಿಸ್ ನ ಬಗ್ಗೆ ಕಾಳಜಿ ವಹಿಸದಿದ್ದರೆ ಅದು ಮಾರಕವಾಗಬಹುದು ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸದ್ಯ ಜಾರಿಯಿರುವ ಲಾಕ್ ಡೌನ್ ನ್ನು ಮತ್ತೊಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದ್ದು, ‘ದೆಹಲಿಯಲ್ಲಿ ಕೋವಿಡ್ ಪ್ರಸರಣವನ್ನು ತಡೆಯಲು ಹೇರಲಾಗಿರುವ ಲಾಕ್ ಡೌನ್ ನನ್ನು ಇಂದು(ಭಾನುವಾರ) ಒಂದು ವಾರದವರೆಗೆ ವಿಸ್ತರಿಸಿ ಮುಖ್ಯಮಂತ್ರ ಕೇಜ್ರಿವಾಲ್ ಆದೇಶಿಸಿದ್ದರು.
ಇದನ್ನೂ ಓದಿ : ಉಪ್ಪಿನಂಗಡಿ : ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಗೊಂಡು ಮೆಸ್ಕಾಂ ಉದ್ಯೋಗಿ ಸಾವು