Advertisement

ಕ್ಯಾಪಿಟಲ್ಸ್ ವರ್ಸಸ್ ರಾಯಲ್ಸ್: ಟಾಸ್ ಗೆದ್ದ ಸಂಜು, ರಾಜಸ್ಥಾನ ತಂಡದಲ್ಲಿ ಎರಡು ಬದಲಾವಣೆ

03:18 PM Sep 25, 2021 | Team Udayavani |

ಅಬುಧಾಬಿ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಯುಎಇ ಚರಣದಲ್ಲಿ ಇಂದು ಮೊದಲ ಬಾರಿಗೆ ಎರಡು ಪಂದ್ಯಗಳು ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಮತ್ತು ರಾಜಸ್ಥಾನ ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಪಂಜಾಬ್ ಮತ್ತು ಹೈದರಾಬಾದ್ ತಂಡಗಳು ಆಡಲಿದೆ.

Advertisement

ಅಬುಧಾಬಿಯ ಶೇಕ್ ಝಯೀದ್ ಮೈದಾನದಲ್ಲಿ ಮೊದಲ ಪಂದ್ಯ ಆರಂಭವಾಗುತ್ತಿದೆ. ಟಾಸ್ ಗೆದ್ದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಎರಡೂ ತಂಡಗಳು ತಮ್ಮ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ದಲ್ಲಿ ಮಾರ್ಕಸ್ ಸ್ಟೋಯಿನಸ್ ಬದಲು ಲಲಿತ್ ಯಾದವ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಕೇವಲ ಮೂವರು ವಿದೇಶಿ ಆಟಗಾರರೊಂದಿಗೆ ಆಡುತ್ತಿದೆ. (ಹೆಟ್ಮೈರ್, ರಬಾಡ, ನೋರ್ಜೆ)

ರಾಜಸ್ಥಾನ್ ರಾಯಲ್ಸ್ ತಂಡ ಇಂದು ಎರಡು ಬದಲಾವಣೆ ಮಾಡಿಕೊಂಡಿದೆ. ಎವಿನ್ ಲೂಯಿಸ್ ಮತ್ತು ಕ್ರಿಸ್ ಮೊರಿಸ್ ಅವರು ತಂಡದಿಂದ ಹೊರಬಿದ್ದಿದ್ದು, ಅವರ ಬದಲಿಗೆ ಡೇವಿಡ್ ಮಿಲ್ಲರ್ ಮತ್ತು ತಬ್ರೇಜ್ ಶಂಸಿ ಆಡುವ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ.

ತಂಡಗಳು

Advertisement

ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾ/ವಿ.ಕೀ), ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಿಲ್ಲರ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೇವತಿಯಾ, ಕಾರ್ತಿಕ್ ತ್ಯಾಗಿ, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್, ತಬ್ರೇಜ್ ಶಮ್ಸಿ

ದೆಹಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾ/ವಿ.ಕೀ), ಲಲಿತ್ ಯಾದವ್, ಶಿಮ್ರಾನ್ ಹೆಟ್ಮೈರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಚ್ ನೋರ್ಜೆ, ಅವೇಶ್ ಖಾನ್

Advertisement

Udayavani is now on Telegram. Click here to join our channel and stay updated with the latest news.

Next