ನವದೆಹಲಿ: ಕೋವಿಡ್ 19 ಸೋಂಕು ಪ್ರಕರಣ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರರಾಜಧಾನಿ ದೆಹಲಿ 3ನೇ ಹಂತದ ಅನ್ ಲಾಕ್ (ಲಾಕ್ ಡೌನ್ ಸಡಿಲಿಕೆ)ಗೆ ಸಿದ್ಧತೆ ನಡೆಸುತ್ತಿದೆ. ಜೂನ್ 14ರಂದು ಲಾಕ್ ಡೌನ್ ಮುಕ್ತಾಯಗೊಳ್ಳಲಿದೆ. ಈಗಾಗಲೇ ಮೇ 31ರಂದು ಮೊದಲ ಹಂತದ ಲಾಕ್ ಡೌನ್ ಸಡಿಲಿಕೆ ಹಾಗೂ ಜೂನ್ 7ರಂದು 2ನೇ ಹಂತದ ಸಡಿಲಿಕೆ ಮಾಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗಮನಿಸಿ: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಯಲಿದೆ ಆನ್ ಲೈನ್ ಪರೀಕ್ಷೆ
ವರದಿಗಳ ಪ್ರಕಾರ, ಒಂದು ಅಥವಾ ಎರಡು ದಿನದಲ್ಲಿ ದೆಹಲಿ ವಿಪತ್ತು ನಿರ್ವಹಣಾ ಅಧಿಕಾರಿಗಳ ಜತೆ ಸಭೆ ನಡೆಸಿದ ಕೂಡಲೇ 3ನೇ ಹಂತದ ಲಾಕ್ ಡೌನ್ ನಿರ್ಬಂಧ ತೆರವುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿ ಹೇಳಿದೆ.
ಜೂನ್ 12ರಂದು ಆಡಳಿತಾರೂಢ ಆಮ್ ಆದ್ಮಿ ಪಕ್ಷ ವಿನಾಯ್ತಿ ಕುರಿತು ಘೋಷಿಸುವ ನಿರೀಕ್ಷೆ ಇದೆ. ಹೋಟೆಲ್ ಮತ್ತು ವಾರದ ಮಾರುಕಟ್ಟೆ ತೆರೆಯುವ ನಿರ್ಧಾರ ಮುಂದೂಡುವ ಸಾಧ್ಯತೆ ಇದೆ. ಪ್ರಕರಣಗಳ ಆಧಾರದ ಮೇಲೆ ನಿಧಾನಕ್ಕೆ ಅನ್ ಲಾಕ್ ಪ್ರಕ್ರಿಯೆ ಜಾರಿಗೊಳಿಸುವುದಾಗಿ ವರದಿ ತಿಳಿಸಿದೆ.
ಮೂರನೇ ಹಂತದಲ್ಲಿ ಚಿತ್ರಮಂದಿರ. ಜಿಮ್, ಸಲೂನ್ ತೆರೆಯಲು ಅವಕಾಶ ನೀಡುವ ಸಾಧ್ಯತೆ ಇದೆ. ವಾರದ ಮಾರುಕಟ್ಟೆ ತೆರೆಯುವ ನಿರ್ಧಾರ ಮುಂದೂಡಿಕೆ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.