Advertisement

ಪ್ಲಾಸ್ಟಿಕ್ ಬ್ಯಾಗ್ ಸಂಗ್ರಹಿಸಿದ್ದಕ್ಕೆ ಅಂಗಡಿಯವಗೆ ಬಿತ್ತು ಎರಡು ಲಕ್ಷ ದಂಡ!

09:36 AM Sep 27, 2019 | Team Udayavani |

ಹೊಸದಿಲ್ಲಿ: ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಸಂಗ್ರಹಿಸಿದ ಕಾರಣಕ್ಕಾಗಿ ದೆಹಲಿಯ ನಂಗ್ಲೋಲಿ – ರೋಹ್ಟಕ್ ರಸ್ತೆಯ ಅಂಗಡಿ ಮಾಲಕನ ಮೇಲೆ ಎರಡು ಲಕ್ಷ ದಂಡ ಹಾಕಲಾಗಿದೆ.

Advertisement

ಪ್ಲಾಸ್ಟಿಕ್ ಚೀಲಗಳನ್ನು ಈಗಾಗಲೇ ನಿಷೇಧಿಸಿರುವ ಕಾರಣ ಅಧಿಕಾರಿಗಳು ಇತ್ತೀಚೆಗೆ ಅಂಗಡಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಒಂದು ಅಂಗಡಿಯಲ್ಲಿ 18 ಕೆಜಿಯಷ್ಟು ಪ್ಲಾಸ್ಟಿಕ್ ಬ್ಯಾಗ್ ಗಳು ಪತ್ತೆಯಾಗಿದ್ದವು. ಹೀಗಾಗಿ ಅಧಿಕಾರಿಗಳು ಬರೋಬ್ಬರಿ ಎರಡು ಲಕ್ಷ ರೂ ದಂಡ ಜಡಿದಿದ್ದಾರೆ ಎನ್ನಲಾಗಿದೆ.

ಆದರೆ ನಿಯಮಗಳ ಪ್ರಕಾರ 100 ಕೆಜಿ ಪ್ಲಾಸ್ಟಿಕ್ ಬ್ಯಾಗ್ ಗೆ ಎರಡು ಲಕ್ಷದಷ್ಟು ದಂಡ ಹಾಕಬಹುದು. ಒಂದು ವೇಳೆ 500 ಕೆಜಿ ಪ್ಲಾಸ್ಟಿಕ್ ಚೀಲ ದೊರೆತರೆ ಆಗ ಐದು ಲಕ್ಷ ದಂಡ ಹಾಕಲು ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next