Advertisement

ದೆಹಲಿಗೆ ನಾಳೆ 205 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ವರ್ಗಾವಣೆ : ರೈಲ್ವೆ ಸಚಿವಾಲಯ

07:03 PM May 03, 2021 | Team Udayavani |

ನವದೆಹಲಿ : ರೈಲ್ವೆ 205 ಟನ್  ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ನನ್ನು(ಎಲ್‌ಎಂಒ) ಮಂಗಳವಾರ(ಏ. 04) ಬೆಳಿಗ್ಗೆ ದೆಹಲಿಗೆ ತಲುಪಿಸಲಿದೆ ಎಂದು ರಾಷ್ಟ್ರೀಯ ಸಾರಿಗೆ ತಿಳಿಸಿದೆ.

Advertisement

ಆರು ಟ್ಯಾಂಕರ್‌ ಗಳನ್ನು ಹೊಂದಿರುವ ‘ಆಕ್ಸಿಜನ್ ಎಕ್ಸ್‌ಪ್ರೆಸ್’ ನಲ್ಲಿ 120 ಟನ್ ಎಲ್‌ಎಂಒ ಪಶ್ಚಿಮ ಬಂಗಾಳದ ದುರ್ಗಾಪುರದಿಂದ ದೆಹಲಿಗೆ ತಲುಪಿಸಲಾಗುವುದು, ನಾಲ್ಕು ಟ್ಯಾಂಕರ್‌ ಗಳಲ್ಲಿ 85 ಟನ್ ಗುಜರಾತ್‌ ನ ಹಾಪಾದಿಂದ ರಾಷ್ಟ್ರ ರಾಜಧಾನಿಗೆ ತಲುಪಿಸಲಾಗುವುದು ಎಂದು ತಿಳಿಸಿದೆ.

ಓದಿ : ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 12 ಮಂದಿ ಸೇರಿ ಒಟ್ಟು 24 ಮಂದಿ ಸಾವು|

ಹಾಪಾದಿಂದ ದೆಹಲಿಗೆ ಬರುವ ರೈಲು ಗುರ್ಗಾಂವ್ ನಲ್ಲಿ   ನಿಲ್ಲುತ್ತದೆ. ಎಲ್‌ ಎಂ ಒ ನನ್ನು ಟ್ರಕ್‌ ಗಳ ಮೂಲಕ ವರ್ಗಾಯಿಸಲಾಗುತ್ತದೆ.

ಒಡಿಶಾದ ಅಂಗುಲ್‌ ನಿಂದ 30.86 ಟನ್ ಎಲ್‌ ಎಂ ಒ ವರ್ಗಾಯಿಸುವ ‘ಆಕ್ಸಿಜನ್ ಎಕ್ಸ್‌ಪ್ರೆಸ್’ ಇಂದು ಸಂಜೆ ವೇಳೆಗೆ ದೆಹಲಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಈ ಹಿಂದೆ ತಿಳಿಸಿತ್ತು. ಅವುಗಳನ್ನು ಹರಿಯಾಣಕ್ಕೆ ಪೂರೈಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.

Advertisement

ಸುಮಾರು 205 ಟನ್ ಗಳಷ್ಟು ಎಲ್ ಎಂ ಒ ದೆಹಲಿಗೆ ತಲುಪಿಸಲಿದೆ. ಇದರಲ್ಲಿ ದುರ್ಗಾಪುರದಿಂದ ಬರುವ 120 ಟನ್ ಮತ್ತು ಹಾಪಾದಿಂದ ಬರುವ 85 ಟನ್ ಸೇರಿದೆ” ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಇನ್ನು, ರೈಲ್ವೆ ಇಲಾಖೆ ಇದುವರೆಗೆ 1, 125 ಟನ್ ಗಳನ್ನು ಎಲ್ ಎಂ ಒ ಗಳನ್ನು ದೇಶದ ಬೇರೆ ಬೇರೆ ರಾಜ್ಯಗಳಿಗೆ ವರ್ಗಾಯಿಸಿದೆ. 20 “ಆಕ್ಸಿಜನ್ ಎಕ್ಸ್ ಪ್ರೆಸ್” ರೈಲುಗಳು ಈಗಾಗಲೇ ಆಕ್ಸಿಜನ್ ಗಳನ್ನು ಪೂರೈಕೆ ಮಾಡಲು ಕಾರ್ಯ ನಿರ್ವಹಿಸುತ್ತಿವೆ, ಇನ್ನೂ ಏಳು ರೈಲುಗಳು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ಆಕ್ಸಿಜನ್ ಪೂರೈಕೆ ಮಾಡಲು ಸಿದ್ಧವಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಓದಿ : ಧರ್ಮಸ್ಥಳದ ಸೇವಾ ಸಹಕಾರಿ ಬ್ಯಾಂಕಿನ ಸಿಇಒ ರವೀಂದ್ರನ್  ನೇಣಿಗೆ ಶರಣು

Advertisement

Udayavani is now on Telegram. Click here to join our channel and stay updated with the latest news.

Next