Advertisement

ದಿಲ್ಲಿ ಹಿಂಡಾನ್‌ ವಾಯುನೆಲೆಯಿಂದ ಹುಬ್ಬಳ್ಳಿಗೆ ನೇರ ವಿಮಾನ

09:48 AM Nov 06, 2019 | Team Udayavani |

ಹೊಸದಿಲ್ಲಿ : ರಾಜ್ಯದ ವಾಣಿಜ್ಯ ನಗರಿಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಹೊಸದಿಲ್ಲಿ (ಹಿಂಡಾನ್‌) ವಿಮಾನ ಯಾನದ ಬೇಡಿಕೆ ಕೊನೆಗೂ ಈಡೇರುತ್ತಿದೆ. ಬುಧವಾರದಿಂದ ವಿಮಾನ ಯಾನ ಪ್ರಾರಂಭವಾಗಲಿದೆ ಎಂದು ಸ್ಟಾರ್‌ ಏರ್‌ ಸಂಸ್ಥೆ ತಿಳಿಸಿದೆ.

Advertisement

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸ್ಟಾರ್‌ ಏರ್‌ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜ್‌ ಕುನ್ವಾರ್‌ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ನಾಳೆಯಿಂದ ಹಿಂಡಾನ್‌ ವಾಯುನೆಲೆಯಿಂದ ಅಧಿಕೃತವಾಗಿ ಸ್ಟಾರ್‌ ಏರ್‌ ಒಡೆತನದ ವಿಮಾನ ಹುಬ್ಬಳಿಗೆ ಹಾರಾಟ ನಡೆಸಲಿದೆ. ವಾರದ ಮೂರು ದಿನ ಹಾರಾಟ ನಡೆಸಲಿದ್ದು ವಿಮಾನದಲ್ಲಿ ಒಟ್ಟು 50 ಸೀಟುಗಳು ಇರಲಿವೆ.

ವೇಳಾಪಟ್ಟಿ
ಮಧ್ಯಾಹ್ನ 1.05 ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 3.45ಕ್ಕೆ ಹಿಂಡಾನ್‌ ತಲುಪುತ್ತದೆ. ಪುನಃ ಅಲ್ಲಿಂದ ಸಂಜೆ 4.10 ಕ್ಕೆ ಹೊರಟು ಹುಬ್ಬಳ್ಳಿ ವಿ. ನಿಲ್ದಾಣಕ್ಕೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next