Advertisement

Delhi ; ಬಾಲಕಿ ಮೇಲೆ ಅಧಿಕಾರಿ ಮಾತ್ರವಲ್ಲದೆ ಬೇರೆಯವರಿಂದಲೂ ಅತ್ಯಾಚಾರ?

12:23 AM Aug 29, 2023 | Team Udayavani |

ಹೊಸದಿಲ್ಲಿ: ದಿಲ್ಲಿ ಸರಕಾರದ ಮಾಜಿ ಹಿರಿಯ ಅಧಿಕಾರಿಯಿಂದ ಅತ್ಯಾಚಾರಕ್ಕೊಳ ಗಾದ ಬಾಲಕಿ ಬೇರೆಯವರಿಂದಲೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳಾ? ಈ ಸಂಬಂಧಿಸಿದಂತೆ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ಎಂದು ದಿಲ್ಲಿ ಹೈಕೋರ್ಟ್‌ ಪೊಲೀಸರನ್ನು ಸೋಮವಾರ ಪ್ರಶ್ನಿಸಿದೆ.

Advertisement

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲೇ ಇದ್ದಂಥ ಮಾಜಿ ಅಧಿಕಾರಿ ಪ್ರೇಮೋದಯ್‌ ಖಾಖಾ ಅವರ ನಿವಾಸದಲ್ಲೇ ಆಶ್ರಯ ಪಡೆದಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆ ಗರ್ಭ ಧರಿಸಲು ಕಾರಣವಾಗಿದ್ದ. ಈ ಹಿನ್ನೆಲೆಯಲ್ಲಿ ಆಗಸ್ಟ್‌ 21ರಂದು ಆತನನ್ನು ಬಂಧಿಸಲಾಗಿತ್ತು.

ಈ ವೇಳೆ ಬಾಲಕಿ ತನ್ನ ವಿರುದ್ಧ ಬೇರೆ ಅವರೂ ಕೂಡ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಹೇಳಿಕೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಬಾಲಕಿ ಮೇಲೆ ದೌರ್ಜನ್ಯ ಎಸಗಿದ ಆ ಇನ್ನಿತರರು ಯಾರು? ಅವರ ವಿರುದ್ಧ ಏನು ಕ್ರಮ ತೆಗದುಕೊಂಡಿದ್ದೀರಿ? ಎಂದು ಪ್ರಶ್ನಿಸಿದ್ದಲ್ಲದೇ, ಬಾಲಕಿಯ ಗುರುತನ್ನು ಗೌಪ್ಯವಾಗಿಡುವಂತೆ ಪೊಲೀಸರಿಗೆ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next