Advertisement
ದೀಪಾವಳಿ ಮುಗಿದ ಅನಂತರ ಹೊಸದಿಲ್ಲಿಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ, ಆದ್ದರಿಂದ ಆಟಗಾರರಿಗೆ ಸಮಸ್ಯೆ ಯಾಗುತ್ತದೆ. ಪಂದ್ಯ ಆಡಿಸಬೇಡಿ ಎಂದು ಹಲವರು ಒತ್ತಾಯಿಸಿದ್ದಾರೆ. ಇದಕ್ಕೆ ಬಿಸಿಸಿಐ ಮಣಿದಿಲ್ಲ.
“ನಮಗೆ ವಾಯುಮಾಲಿನ್ಯ ನಿಯಂತ್ರಣ ಮಂಡಳಿ, ರವಿವಾರದ ವೇಳೆ ಪರಿಸ್ಥಿತಿ ತಿಳಿಯಾ ಗುತ್ತದೆ ಎಂಬ ಮಾಹಿತಿ ನೀಡಿದೆ. ಅಲ್ಲದೇ ಈಗ ಪಂದ್ಯದ ತಾಣವನ್ನು ಬದಲಾಯಿಸುವುದು ಸೂಕ್ತವಲ್ಲ’ ಎನ್ನುವುದು ಬಿಸಿಸಿಐ ನಿಲುವು. ಇನ್ನೊಂದು ಕಡೆ ಬಿಸಿಸಿಐ ನೂತನ ಪದಾಧಿಕಾರಿಗಳಿಗೆ ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೂ ಆಗದಂತಹ ಪರಿಸ್ಥಿತಿಯಿದೆ. ಇದಕ್ಕೆ ಸಮಯಾವಕಾಶದ ಕೊರತೆಯೇ ಕಾರಣ.
Related Articles
Advertisement
ಪರಿಸ್ಥಿತಿ ಸರಿಯಿಲ್ಲ, ಹಾಗಂತ ಯಾರೂ ಸಾಯುವ ಸ್ಥಿತಿಯಲ್ಲಿಲ್ಲ!ಹೊಸದಿಲ್ಲಿಯ ವಾಯುಮಾಲಿನ್ಯದ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಾಂಗ್ಲಾ ಕ್ರಿಕೆಟ್ ತಂಡದ ತರಬೇತುದಾರ ಡೊಮಿಂಗೊ ರಸೆಲ್, “ಇಲ್ಲಿನ ಪರಿಸ್ಥಿತಿ ಉತ್ತಮವಾಗಿಲ್ಲ ನಿಜ, ಹಾಗಂತ ಯಾರೂ ಸಾಯುವ ಸ್ಥಿತಿಯಲ್ಲಿಲ್ಲ’ ಎಂದಿದ್ದಾರೆ. “ನಮಗೇನೂ ಮಾಲಿನ್ಯ ಹೊಸತಲ್ಲ, ನಮಗೆ ಇದರ ಅನುಭವವಿದೆ. ಇದೆಲ್ಲ ಕೆಲವು ದೇಶಗಳಿಗೆ ಮಾತ್ರ ದೊಡ್ಡ ಸುದ್ದಿ ಅನಿಸಬಹುದು. ಗಂಟಲು ನೋವು, ಕಣ್ಣುಕೆರೆತ ಇದೆ. ಪರಾÌಗಿಲ್ಲ, ಹೊಂದಿಕೊಳ್ಳಬಹುದು. ಬಾಂಗ್ಲಾಕ್ಕೆ ಮಾತ್ರವಲ್ಲ, ಎರಡೂ ತಂಡಗಳಿಗೆ ಇದು ಸಮಸ್ಯೆಯಾಗಿದೆ’ ಎಂದು ಡೊಮಿಂಗೊ ಹೇಳಿದ್ದಾರೆ. “ಇದು ಕೇವಲ 3 ಗಂಟೆಗಳ ಪಂದ್ಯ. ಇದನ್ನು ಆಡುವುದು ಕಷ್ಟವೇನಲ್ಲ. ಶ್ರೀಲಂಕಾ ಆಟಗಾರರು ಹಿಂದೆ ಕಷ್ಟಪಟ್ಟಿದ್ದಾರೆ ಎಂಬುದು ಗೊತ್ತು. ಆದರೆ ಬಾಂಗ್ಲಾದೇಶದಲ್ಲೂ ಇಂಥದೇ ಪರಿಸ್ಥಿತಿಯಿದೆ. ಆಟಗಾರರು ಪಂದ್ಯದ ಕಡೆಗೆ ಗಮನಹರಿಸಿದ್ದಾರೆ. ವಾತಾವರಣದ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಂಡಿಲ್ಲ’ ಎಂದಿದ್ದಾರೆ. ಆಟಕ್ಕೆ ತೊಂದರೆ ಇಲ್ಲ: ವಿಕ್ರಂ ರಾಥೋಡ್
ದಿಲ್ಲಿಯಲ್ಲಿ ವಾಯುಮಾಲಿನ್ಯದ ತೀವ್ರತೆ ಹೆಚ್ಚಿದೆ, ಆದರೂ ನಾವು ಪಂದ್ಯವನ್ನು ಆಡುತ್ತೇವೆ ಎಂದು ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಥೋಡ್, “ದಿಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲ್ಲಿ ಕ್ರಿಕೆಟ್ ಆಡಲಾಗದಷ್ಟು ಮಟ್ಟಿಗೆ ತೊಂದರೆ ಸಂಭವಿಸಿಲ್ಲ. ಅಭ್ಯಾಸದ ವೇಳೆ ಭಾರತ, ಬಾಂಗ್ಲಾ ಆಟಗಾರರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಮೊದಲೇ ನಿಗದಿಯಾದಂತೆ ಪಂದ್ಯ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದಿದ್ದಾರೆ.