ಹೊಸದಿಲ್ಲಿ : ವಾರದ ಹಿಂದೆ ಕೋಮುಗಲಭೆಗೆ ಸಾಕ್ಷಿಯಾಗಿದ್ದ ಹೌಜ್ ಕಾಜಿ ಪ್ರದೇಶದಲ್ಲಿ ವಿಶ್ವ ಹಿಂದು ಪರಿಷದ್ ಮಂಗಳವಾರ ಬೃಹತ್ ಶೋಭಾ ಯಾತ್ರೆ ನಡೆಸುತ್ತಿದ್ದು, ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿ ಪೊಲೀಸರು ಬಿಗಿ ಭದ್ರತೆಕೈಗೊಂಡಿದ್ದು , ಡ್ರೋನ್ ಕ್ಯಾಮರಾಗಳ ಮೂಲಕ ಕಟ್ಟೆಚ್ಚರ ವಹಿಸಿದ್ದಾರೆ.
ಶೋಭಾ ಯಾತ್ರೆ ನಡೆಯುವ ಸ್ಥಳದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.
ಕೋಮು ಸೂಕ್ಷ್ಮ ಪ್ರದೇಶದಲ್ಲಿ ಭಾವಕ್ಯತೆ ಇದೆ ಎನ್ನುವುದನ್ನು ತೋರಿಸುವ ಸಲುವಾಗಿ ಮುಸ್ಲಿಂ ಮುಖಂಡರು ವಿಎಚ್‌ಪಿ ಶೋಭಾ ಯಾತ್ರೆಯ ಸ್ವಾಗತಕ್ಕೆ ಸಿದ್ದರಾಗಿದ್ದಾರೆ. ಗುಲಾಬಿ ಎಸಲುಗಳು ಮತ್ತು ನೀರಿನ ಬಾಟಲಿಗಳನ್ನು ಇರಿಸಿಕೊಂಡು ಸ್ವಾಗತಕ್ಕೆ ಸಿದ್ದರಾಗಿದ್ದಾರೆ.
ಕಳೆದ ಶನಿವಾರ ಲಾಲ್ ಕುವಾನ್ ಪ್ರದೇಶದಲ್ಲಿ ದೇವಾಲಯ ವೊಂದನ್ನು ಧ್ವಂಸಗೈದ ಬಳಿಕ ಪರಿಸ್ಥಿತಿ ಬಿಗಡಾಯಿಸಿ ಕೋಮುಗಲಭೆಗೆ ಕಾರಣವಾಗಿತ್ತು. ಈಗಾಗಲೆ ಪ್ರಕರಣಕ್ಕೆ ಸಂಬಂಧಿಸಿ 17 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.