ಹೊಸದಿಲ್ಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಪೊಲೀಸರು ರವಿವಾರ ಬೆಳಗ್ಗೆ ತೆರಳಿದ್ದು, ಭಾರತ್ ಜೋಡೊ ಯಾತ್ರೆ ವೇಳೆ ನೀಡಿದ ಹೇಳಿಕೆಗೆ ಸಂಬಂಧಿಸಿ ಸ್ಪಷ್ಟನೆ ಕೇಳಿದ್ದಾರೆ.
ಇದಕ್ಕೂ ಮುನ್ನ, ಮಾರ್ಚ್ 15 ರಂದು, ದೆಹಲಿ ಪೊಲೀಸರ ತಂಡವು ರಾಹುಲ್ ಗಾಂಧಿಗೆ ನೋಟಿಸ್ ನೀಡಲು ಅವರ ಮನೆಯ ಹೊರಗೆ ಮೂರು ಗಂಟೆಗಳ ಕಾಲ ಕಾದಿತ್ತು. ಆದರೆ ಆ ದಿನ ಪೊಲೀಸ್ ತಂಡವನ್ನು ಭೇಟಿಯಾಗಲು ಗಾಂಧಿ ಬಂದಿರಲಿಲ್ಲ ಎಂದು ಮೂಲಗಳು ಎಎನ್ ಐಗೆ ತಿಳಿಸಿವೆ.
ಅದರ ಮರುದಿನ ಪೊಲೀಸ್ ಮತ್ತೆ ನೋಟಿಸ್ ನೀಡಲು ತೆರಳಿದ್ದರು. ಈ ವೇಳೆ ಸುಮಾರು ಒಂದೂವರೆ ಗಂಟೆಗಳ ಕಾಯುವಿಕೆಯ ಬಳಿಕ ರಾಹುಲ್ ಸ್ವತಃ ನೋಟಿಸ್ ಪಡೆದಿದ್ದರು.
ಭಾರತ್ ಜೋಡೊ ಯಾತ್ರೆಯ ವೇಳೆ ಹಲವರು ತಮ್ಮ ಬಳಿ ಬಂದು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದರು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದರ ಬಗ್ಗೆ ಮಾಹಿತಿ ನೀಡಿ ಎಂದು ಪೊಲೀಸರು ರಾಹುಲ್ ಗಾಂಧಿಗೆ ನೋಟಿಸ್ ನೀಡಿದ್ದರು.
ಭಾರತ್ ಜೋಡೋ ಯಾತ್ರೆಯ ವೇಳೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ‘ಲೈಂಗಿಕ ಕಿರುಕುಳ’ ಸಂತ್ರಸ್ತರ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ನೋಟಿಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಪಿ (ಎಲ್&ಓ) ಸಾಗರ್ ಪ್ರೀತ್ ಹೂಡಾ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಆಗಮಿಸಿದರು.