Advertisement

ಬೆಚ್ಚಿ ಬೀಳಿಸುವ ಘಟನೆ: ದೆಹಲಿ ಫ್ಲೈಓವರ್ ಬಳಿ ಮಹಿಳೆಯ ದೇಹದ ಭಾಗಗಳು ಪತ್ತೆ, ಪೊಲೀಸರಿಂದ ಶೋಧ

11:57 AM Jul 12, 2023 | Team Udayavani |

ನವದೆಹಲಿ: ಕಳೆದ ವರ್ಷ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಂತೆಯೇ ದೆಹಲಿ ಪೊಲೀಸರು ಇಂದು ಗೀತಾ ಕಾಲೋನಿಯ ಫ್ಲೈಓವರ್ ಬಳಿ ಮಹಿಳೆಯೊಬ್ಬಳ ದೇಹದ ಭಾಗಗಳನ್ನು ಪತ್ತೆ ಮಾಡಿದ್ದಾರೆ.

Advertisement

ಗೀತಾ ಕಾಲೋನಿಯ ಫ್ಲೈಓವರ್ ಬಳಿ ಗಿಡಗಂಟಿಗಳ ಪ್ರದೇಶದಲ್ಲಿ ಮಹಿಳೆಯೊಬ್ಬರ ದೇಹದ ಭಾಗಗಳು ಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕಳೆದ ವರ್ಷ, 27 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಶ್ರದ್ಧಾ ವಾಲ್ಕರ್ ಅವರ ಲೈವ್-ಇನ್ ಪಾಲುದಾರ ಆಫ್ತಾಬ್ ಪೂನಾವಾಲಾ ಕತ್ತು ಹಿಸುಕಿ, ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೇಹದ ಕೆಲವು ಭಾಗಗಳನ್ನು ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟು 18 ದಿನಗಳ ಕಾಲ ಕಾಡಿನಲ್ಲಿ ವಿಲೇವಾರಿ ಮಾಡಿದ್ದು. ಆಕೆಯ ಗುರುತನ್ನು ಮರೆಮಾಚಲು ಆಕೆಯ ಮುಖವನ್ನು ಸುಟ್ಟು ಹಾಕಲಾಗಿದ್ದು ಅದಾದ ಆರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ಇದೀಗ ಅದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಮೃತ ಮಹಿಳೆ ಯಾರು ಎಲ್ಲಿಯವರು ಎಂಬ ವಿಚಾರ ಪೊಲೀಸರ ತನಿಖೆ ಬಳಿಕ ಗೊತ್ತಾಗಬೇಕಿದೆ.

ಇದನ್ನೂ ಓದಿ: WIvsIND: ಗಿಲ್‌ ಜಾಗದಲ್ಲಿ ಜೈಸ್ವಾಲ್‌ ಬ್ಯಾಟಿಂಗ್; ದೀರ್ಘಕಾಲದ ಬಳಿಕ ತಂಡಕ್ಕೆ ಎಡಗೈ ಓಪನರ್

Advertisement
Advertisement

Udayavani is now on Telegram. Click here to join our channel and stay updated with the latest news.

Next