Advertisement

HDFC ಸೇರಿ ಹಲವು ಬ್ಯಾಂಕ್ ಗೆ 300 ಕೋಟಿ ವಂಚನೆ: ಖಾಸಗಿ ಕಂಪನಿ ಸಿಎಫ್ ಒ ಶರ್ಮಾ ಬಂಧನ

04:31 PM Dec 18, 2020 | Nagendra Trasi |

ನವದೆಹಲಿ:ಎಚ್ ಡಿಎಫ್ ಸಿ ಮತ್ತು ಇತರ ಬ್ಯಾಂಕ್ ಗಳಿಗೆ 300 ಕೋಟಿ ರೂಪಾಯಿ ವಂಚಿಸಿದ್ದ ಖಾಸಗಿ ಝೆನಿಕಾ ಕಾರು ಸಂಸ್ಥೆಯ ಸಿಎಫ್ ಒ(ಚೀಫ್ ಫೈನಾನ್ಸ್ ಆಫೀಸರ್) ವೈಭವ್ ಶರ್ಮಾನನ್ನು ದೆಹಲಿ ಪೊಲೀಸ್ ವಿಭಾಗದ ಆರ್ಥಿಕ ಅಪರಾಧ ದಳ ಶುಕ್ರವಾರ (ಡಿಸೆಂಬರ್ 18, 2020) ಬಂಧಿಸಿರುವುದಾಗಿ ತಿಳಿಸಿದೆ.

Advertisement

ಝೆನಿಕಾ ಖಾಸಗಿ ಕಾರಿನ ಸಂಸ್ಥೆಯ ಸಿಎಫ್ ಒ ವೈಭವ್ ಶರ್ಮಾ 102 ಕೋಟಿ ರೂಪಾಯಿ ಹಣ ದುರುಪಯೋಗಪಡಿಸಿಕೊಂಡಿರುವುದಾಗಿ ಎಚ್ ಡಿಎಫ್ ಸಿ ಬ್ಯಾಂಕ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್ ನೀಡಿದ್ದ ದೂರಿನ ಅನ್ವಯ ಈ ಪ್ರಕರಣದ ತನಿಖೆ ಚುರುಕುಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಅಪರಾಧ ದಳದ ಅಧಿಕಾರಿಗಳ ಪ್ರಕಾರ, ಆರೋಪಿ ವೈಭವ್ ಶರ್ಮಾ ಕಂಪನಿ ಹೆಸರಿನಲ್ಲಿ 2007ರಲ್ಲಿ ಸಾಲ ಪಡೆದಿದ್ದ. ಝೆನಿಕಾ ಕಂಪನಿ ಆಡಿ ಕಾರು ಮಾರಾಟ ಮತ್ತು ಗ್ರಾಹಕರಿಗೆ ಆರ್ಥಿಕ ನೆರವು ನೀಡುತ್ತಿತ್ತು ಎಂದು ವಿವರಿಸಿದ್ದಾರೆ.

ಎಚ್ ಡಿಎಫ್ ಸಿ ಬ್ಯಾಂಕ್ ಅಧಿಕಾರಿಗಳ ದೂರಿನ ಪ್ರಕಾರ, 2018ರವರೆಗೆ ಎಲ್ಲವೂ ಸುಗಮವಾಗಿತ್ತು. ಏತನ್ಮಧ್ಯೆ ಬ್ಯಾಂಕ್ ಅಧಿಕಾರಿಗಳು ಶೋ ರೂಂಗೆ ಭೇಟಿ ನೀಡಿದಾಗ ಮೋಸದ ಶಂಕೆ ಕಂಡುಬಂದಿತ್ತು. ಶೋ ರೂಂನಲ್ಲಿ 200 ಕಾರುಗಳ ಬದಲಿಗೆ ಕೇವಲ 29 ಕಾರುಗಳು ಮಾತ್ರ ಕಂಡು ಬಂದಿತ್ತು. ಬಳಿಕ ಮೋಸದ ಆರೋಪದಡಿ ಬ್ಯಾಂಕ್ ಶರ್ಮಾ ಮತ್ತು ಮತ್ತಿಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next