Advertisement
ಇದೇ ಮಾದರಿಯನ್ನು ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್ ಅಳವಡಿಸಿಕೊಂಡಿದ್ದರು. ಇಲ್ಲೂ ಅಬ ಕಾರಿ ನೀತಿಯಲ್ಲಿ ಕೆಲವು ಬದಲಾವಣೆ ಗಳನ್ನು ತರಲು ಬಾರ್ ಮಾಲಕರಿಂದ ಲಂಚ ಕೇಳಲಾಗಿದೆ. ರಾಜ್ಯ ಸರಕಾರಕ್ಕೆ ಈ ವಿಚಾರದಲ್ಲಿ ಮುಚ್ಚಿಡಲು ಏನೂ ಇಲ್ಲದಿದ್ದರೆ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ ಎಂದು ಆಗ್ರಹಿಸಿದ್ದಾರೆ.
ಅಬಕಾರಿ ನೀತಿಯಲ್ಲಿ ಬದಲಾವಣೆ ತರಲು ಬಾರ್ ಮಾಲಕರಿಂದ ಲಂಚ ಪಡೆದುಕೊಳ್ಳುವುದಕ್ಕಾಗಿ ರಾಜ್ಯ ಸರಕಾರ ಸಭೆ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸೋರಿಕೆಯಾಗಿರುವ ಬಾರ್ ಮಾಲಕರ ಆಡಿಯೋ ಸಹ ಇದನ್ನೇ ಸ್ಪಷ್ಟ ಪಡಿಸುತ್ತಿದೆ ಎಂದು ಹೇಳಿದೆ.