ನವದೆಹಲಿ: ದೆಹಲಿ ಮೆಟ್ರೋ ರೈಲು ಸಂಪರ್ಕದ ದುರ್ಗಾಬಾಯಿ ದೇಶ್‌ಮುಖ್ ಸೌತ್ ಕ್ಯಾಂಪಸ್-ಲಜಪತ್ ನಗರ ನಡುವಿನ ಸೇವೆಗೆ ಸೋಮವಾರ ಚಾಲನೆ ನೀಡಲಾಯಿತು. ಅದರಲ್ಲಿ ಒಟ್ಟು 6 ನಿಲ್ದಾಣಗಳಿದ್ದು, ಈ ಪೈಕಿ ಸರ್. ಎಂ.ವಿಶ್ವೇಶ್ವರಯ್ಯ ಹೆಸರಿನ ಮೆಟ್ರೋ ನಿಲ್ದಾಣವೂ ಸೇರಿದೆ. ರೈಲಿಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‌ದೀಪ್ ಸಿಂಗ್ ಪುರಿ ಮುಂದಿನ ದಿನ ಗಳಲ್ಲಿ ದರ ಹೆಚ್ಚಳದ ಪ್ರಸ್ತಾಪ ಬರ ಲಾರದು. ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ ಹೆಚ್ಚಿನ ರೀತಿಯ ರಿಯಾ ಯಿತಿ ನೀಡುವ ಪ್ರಸ್ತಾಪ ಕೇಂದ್ರದ ಮುಂದೆ ಇದೆ ಎಂದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವಾರು ಗಣ್ಯರಿದ್ದರು.
ಕನ್ನಡದಲ್ಲಿ ಅಭಿನಂದಿಸಿದ ಸಚಿವ ಅನಂತ ಕುಮಾರ್
ಮೆಟ್ರೋ ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಕನ್ನಡದಲ್ಲಿಯೇ ಮಾತನಾಡಿ ಭಾಷಾಭಿಮಾನ ಮೆರೆದರು. 6 ನಿಲ್ದಾಣಗಳ ಪೈಕಿ ಒಂದಕ್ಕೆ ವಿಶ್ವೇರಯ್ಯನವರ ಹೆಸರು ಇರಿಸಿದ್ದಕ್ಕೆ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.