Advertisement
ಏನಿದು ಘಟನೆ?: ದೆಹಲಿಯ ಪಿಂಕು 2002 ರಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮನೆ ಪಕ್ಕದ ಸ್ನೇಹಿತರೊಂದಿಗೆ ಗೋಲಿಯಾಟವನ್ನು ಆಡುವ ಸಂದರ್ಭದಲ್ಲಿ ತಂದೆ ರತ್ ಪಾಲ್ ಜೋರು ಮಾಡಿದ್ದಾರೆ. ಇದಾದ ಬಳಿಕ ತಾಯಿ ಭಾನುಮತಿ ಕೂಡ ಮಗನಿಗೆ ಗದರಿಸಿದ್ದಾರೆ. ಸಣ್ಣ ಕಾರಣಕ್ಕಾಗಿಯೇ ಮನನೊಂದು ಮನೆಬಿಟ್ಟು ತೆರಳಿದ್ದಾನೆ.
Related Articles
Advertisement
ಸನ್ಯಾಸಿಯಾದ ಮಗನನ್ನು ನೋಡಿ ಭಾವುಕರಾದ ಪೋಷಕರು: 11ನೇ ವಯಸ್ಸಿನಲ್ಲಿ ಮನೆಬಿಟ್ಟು ಹೋಗಿದ್ದ ಪಿಂಕು, ತಂದೆ – ತಾಯಿಯನ್ನು ಹುಡುಕಿಕೊಂಡು ಮೂಲ ಹಳ್ಳಿಗೆ(ಅಮೇಥಿಯ ಖರೌಲಿ) ತನ್ನ ಮೂವರು ಸಹವರ್ತಿಗಳೊಂದಿಗೆ ಬಂದಿದ್ದಾನೆ. ಆತನ ಯೋಜನೆ,ಯೋಚನೆ ಆಲೋಚನೆ, ಹಾವಭಾವಗಳು ಸಂಪೂರ್ಣವಾಗಿ ಸನ್ಯಾಸಿಯಂತೆಯೇ ಆಗಿದೆ.
ಪೋಷಕರ ಮುಂದೆ ರಾಜ ಭರ್ತಾರಿಯ ಕಥೆಯನ್ನು ಸಾರಂಗಿಯಲ್ಲಿ ಪಿಂಕು ನುಡಿಸಿದ್ದಾನೆ. ರಾಜ ಭರ್ತಾರಿ ಸನ್ಯಾಸಿಯಾಗಲು ಸಮೃದ್ಧ ರಾಜ್ಯವನ್ನು ಹೇಗೆ ತೊರೆದನು ಎಂಬುದು ಹಾಡಿನ ಸಾಹಿತ್ಯವಾಗಿದೆ.
ಪಿಂಕು ಸನ್ಯಾಸಿಯಾಗಿ ತನ್ನ ತಾಯಿಯ ಬಳಿಯಿಂದ ಭಿಕ್ಷೆಯನ್ನು ತೆಗೆದುಕೊಂಡು ಹಳ್ಳಿಯಿಂದ ತೆರಳಿದ್ದಾರೆ.
ತನ್ನ ಮಗ ಸೇರಿರುವ ಧಾರ್ಮಿಕ ಪಂಥ ಆತನನ್ನು ಬಿಡುಗಡೆ ಮಾಡಲು 11 ಲಕ್ಷ ರೂ. ಕೇಳುತ್ತಿದೆ ಎಂದು ಪಿಂಕು ತಂದೆ ಆರೋಪಿಸಿದ್ದಾರೆ. ತನ್ನ ಬಳಿ ಅಷ್ಟು ಹಣವಿಲ್ಲ ಎಂದು ಪಿಂಕು ಅವರ ತಂದೆ ಹೇಳಿ ಭಾವುಕರಾಗಿದ್ದಾರೆ.
ತಾನು ಕುಟುಂಬದೊಂದಿಗೆ ಮತ್ತೆ ಒಂದಾಗಲು ನಾನು ಬಂದಿಲ್ಲ. ಸನ್ಯಾಸಿಯ ಜೀವನದ ಸಂಪ್ರದಾಯಕ ಪ್ರಕಾರ ಸನ್ಯಾಸಿಗಳು ತಮ್ಮ ತಾಯಿಯಿಂದ ಭಿಕ್ಷೆ ಸ್ವೀಕರಿಸುವ ಆಚರಣೆಯನ್ನು ಪೂರ್ಣಗೊಳಿಸಬೇಕು. ಈ ಸಾಂಕೇತಿಕ ಕ್ರಿಯೆಯು ಸನ್ಯಾಸಿಗಳ ಜೀವನಕ್ಕೆ ಅವರ ಅಧಿಕೃತ ಪರಿವರ್ತನೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.