Advertisement

ಕೆಲಸ ಕೊಡಿಸುವುದಾಗಿ ನಂಬಿಸಿ ವಾರಗಳ ಕಾಲ ಅತ್ಯಾಚಾರ, ಮೈಮೇಲೆ ಬಿಸಿ ಪದಾರ್ಥ ಸುರಿದು ವಿಕೃತಿ

10:46 AM Feb 07, 2024 | Team Udayavani |

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನ ಯುವತಿಯೊಬ್ಬಳ ಮೇಲೆ ದಕ್ಷಿಣ ದಿಲ್ಲಿಯಲ್ಲಿ ವ್ಯಕ್ತಿಯೊಬ್ಬ ವಾರಗಳ ಕಾಲ ಅತ್ಯಾಚಾರವೆಸಗಿ ಮಹಿಳೆಯ ಮೇಲೆ ಕುದಿಯುವ ಆಹಾರವನ್ನು ಸುರಿದು ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ,

Advertisement

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪರಾಸ್ ನನ್ನು ಪೊಲೀಸರು ಬಂಧಿಸಿದ್ದು ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ:
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ ಮೂಲದ ಮಹಿಳೆಗೆ ದೆಹಲಿಯ ಮೂಲದ ಪರಾಸ್ ಕೆಲಸ ಕೊಡಿಸುವ ಆಮಿಷ ಒಡ್ಡಿದ್ದಾನೆ ಅದರಂತೆ ಮಹಿಳೆ ಡಾರ್ಜಿಲಿಂಗ್‌ ನಿಂದ ದೆಹಲಿಗೆ ಬಂದು ಒಂದು ತಿಂಗಳ ಕಾಲ ಆತನ ಜೊತೆಗೆ ನೆಲೆಸಿದ್ದಾಳೆ ಈ ವೇಳೆ ಆರೋಪಿ ಪರಾಸ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಅಲ್ಲದೆ ಮಹಿಳೆ ವಿರೋಧ ವ್ಯಕ್ತಪಡಿಸಿದ ವೇಳೆ ಕುದಿಯುವ ಬೆಳೆಯನ್ನು ಮೈ ಮೇಲೆ ಸುರಿದು ಹಿಂಸೆ ನೀಡಿದ್ದಾನೆ.

ಜನವರಿ 30 ರಂದು ನೆಬ್ ಸರೈ ಪೊಲೀಸ್ ಠಾಣೆಯ ಪಿಸಿಆರ್ ಗೆ ಕರೆ ಮಾಡಿದ ಮಹಿಳೆ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಜೊತೆಗೆ ಹಲ್ಲೆ ನಡೆಸಿರಿರುವುದಾಗಿ ಹೇಳಿಕೊಂಡಿದ್ದಾಳೆ ಇದರ ಬೆನ್ನತ್ತಿದ ಪೊಲೀಸರು ಮಹಿಳೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಲ್ಲದೆ ಆರೋಪಿ ಪರಾಸ್ ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಮಹಿಳೆಯ ಮೈಮೇಲೆ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಬಿಡುಗಡೆಗೊಂಡಿದ್ದಾರೆ.

Advertisement

ಪೋಲೀಸರ ವಿಚಾರಣೆ ವೇಳೆ ಕೆಲಸದ ವಿಚಾರವಾಗಿ ವ್ಯಕ್ತಿಗೆ ಕರೆ ಮಾಡಿದ್ದು ಆ ಬಳಿಕ ಆತನ ಪರಿಚಯವಾಗಿ ಸ್ನೇಹ ಹುಟ್ಟಿಕೊಂಡಿತು ಅದರಂತೆ ಕೆಲಸ ಕೊಡಿಸುವ ವಿಚಾರವಾಗಿ ದೆಹಲಿಗೆ ಬಂದಿದ್ದೆ ಈ ವೇಳೆ ಆತನ ಜೊತೆಗೆ ಸುಮಾರು ನಾಲ್ಕು ತಿಂಗಳು ಬಾಡಿಗೆ ಮನೆಯಲ್ಲಿ ಇದ್ದಿರುವುದಾಗಿ ಹೇಳಿಕೊಂಡಿದ್ದಾಳೆ ಈ ನಡುವೆ ಪರಾಸ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಅಲ್ಲದೆ ನನ್ನ ಮೇಲೆ ಬಿಸಿ ಪದಾರ್ಥಗಳನ್ನು ಎಸೆದು ವಿಕೃತಿ ಮೆರೆದಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.
ಘಟನೆಗೆ ಸಂಬಂಧಿಸಿ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 376 (ಅತ್ಯಾಚಾರ) ಮತ್ತು 377 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Chicago: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಅಟ್ಟಾಡಿಸಿ ಹಲ್ಲೆ… ಸಹಾಯ ಕೋರಿದ ಪತ್ನಿ

Advertisement

Udayavani is now on Telegram. Click here to join our channel and stay updated with the latest news.

Next