Advertisement

ಅಪ್ರಾಪ್ತ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರ: ಕುಸ್ತಿಪಟು ಬಂಧನ

05:15 AM Jul 20, 2017 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಜೂನಿಯರ್‌ ಕಬಡ್ಡಿ ಆಟಗಾರ್ತಿ ಮೇಲೆ ಕುಸ್ತಿಪಟುವೊಬ್ಬ ಅತ್ಯಾಚಾರ ನಡೆಸಿದ ಪ್ರಕರಣವೊಂದು ನಡೆದಿದೆ. ಆರೋಪಿ 40 ವರ್ಷದ ಕುಸ್ತಿಪಟು ನರೇಶ್‌ ಯಾದವ್‌ನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ನಡೆದಿರುವುದು ಮೇಲ್ನೋಟಕ್ಕೆ ದೃಢ ಪಟ್ಟಿದೆ. ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಆಗಿದ್ದು ಏನು?: ಜುಲೈ 9 ರಂದು ಉತ್ತರ ದಿಲ್ಲಿಯಲ್ಲಿರುವ ಚತ್ರಸಾಲ್‌ ಕ್ರೀಡಾಂಗಣಕ್ಕೆ ಬಾಲಕಿ ತರಬೇತಿಗಾಗಿ ತೆರಳಿದ್ದಳು. ಈ ಸಂದರ್ಭದಲ್ಲಿ ಕ್ರೀಡಾ ಸಲಹೆ ನೀಡುವ ನೆಪದಲ್ಲಿ ನರೇಶ್‌ ದಹಿಯಾ ಎಂಬ ಕುಸ್ತಿಪಟು ಬಾಲಕಿಯನ್ನು ತನ್ನ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಅನಂತರ ಬಾಲಕಿಗೆ ಏನಾಗಿದೆ ಎಂಬುದೆ ಗೊತ್ತಿಲ್ಲ. ಆಕೆ ಎಚ್ಚರಗೊಂಡಾಗ ಫ್ಯಾಟ್‌ನಲ್ಲಿದ್ದಳು. ತನ್ನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಆಕೆ ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ಸ್ವೀಕರಿಸಿದ ಪೊಲೀಸರು ರಾತ್ರಿಯೇ ಆರೋಪಿಯನ್ನು ಆತನ ಮನೆಯಲ್ಲಿ ಬಂಧಿಸಿದ್ದಾರೆ ಎಂದು ಪ್ರಕರಣದ ನೇತೃತ್ವ ಹೊತ್ತ ಹಿರಿಯ  ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ: ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆ ನಡೆದಿದ್ದು, ಅತ್ಯಾಚಾರ ನಡೆದಿರುವುದು ದೃಡಪಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಾಲಕಿ ತೀವ್ರ ಆಘಾತಗೊಂಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಕ್ಕಳ ದೌರ್ಜನ್ಯ ತಡೆ ಕಾಯಿದೆ ಅಡಿ ದೂರು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next