Advertisement

ಕೋವಿಡ್ ಸಂಕಷ್ಟ : ಮೇ 3ರವರೆಗೆ ದೆಹಲಿ ಲಾಕ್ ಡೌನ್ ವಿಸ್ತರಣೆ : ಅರವಿಂದ್ ಕೇಜ್ರಿವಾಲ್

12:18 PM Apr 25, 2021 | Team Udayavani |

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಲಾಕ್ ಡೌನ್ ಅನ್ನು ಇನ್ನು ಒಂದು ವಾರಗಳ ಕಾಲ ಮುಂದುವರೆಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಕಳೆದ ವಾರ ಆರು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಅದರ ಅವಧಿ ನಾಳೆ ಅಂದ್ರೆ ಸೋಮವಾರಕ್ಕೆ ಮುಕ್ತಾಯವಾಗಲಿದ್ದು, ಇದೀಗ ಮತ್ತೆ ದೆಹಲಿ ಲಾಕ್ ಆಗಲಿದೆ.

Advertisement

ಈ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅರವಿಂದ್ ಕೇಜ್ರಿವಾಲ್ ಮುಂದಿನ ಏಳು ದಿನಗಳ ಕಾಲ ಅಂದ್ರೆ ಮೇ 3ರವರೆಗೆ ಈ ಲಾಕ್ ಡೌನ್ ಮುಂದುವರೆಯಲಿದೆ ಎಂದಿದ್ದಾರೆ.

ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಇದೇ ಹಿನ್ನೆಯಲ್ಲಿ ಲಾಕ್ ಡೌನ್ ಅವಶ್ಯಕತೆ ಇದೆ. ಇನ್ನು ಈ ಕೋವಿಡ್ ಹೋರಾಟವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ನಿಂತು ಹೆದರಿಸುತ್ತಿದ್ದೇವೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.  ನಿನ್ನೆ ದೆಹಲಿಯಲ್ಲಿ 24000ಕ್ಕೂ ಅಧಿಕ ಕೋವಿಡ್ ಕೇಸ್ ಗಳು ಪತ್ತೆಯಾಗಿದ್ದು, 357 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next