ನವದೆಹಲಿ: ದೆಹಲಿಯ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಕುರಿತು ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು 2 ಜನರನ್ನು ಬಂಧಿಸಿದೆ. ಬಂಧಿತ ಆರೋಪಿಗಳ ಹೆಸರು ಶರತ್ ರೆಡ್ಡಿ ಮತ್ತು ವಿನಯ್ ಬಾಬು ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದ ಉದ್ಯಮಿಗಳಾಗಿದ್ದು, ಫಾರ್ಮಾ ಕಂಪನಿಯ ಮಾಲೀಕರಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು 5 ಮಂದಿಯನ್ನು ಬಂಧಿಸಲಾಗಿದೆ. ವಾಸ್ತವವಾಗಿ ಇಡಿ ಒಟ್ಟು 3 ಜನರನ್ನು ಬಂಧಿಸಿದ್ದರೆ ಸಿಬಿಐ ಇಬ್ಬರನ್ನು ಬಂಧಿಸಿದೆ. ಈ ವೇಳೆ ಆರೋಪಿ ದಿನೇಶ್ ಅರೋರಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸರ್ಕಾರಿ ಸಾಕ್ಷಿಯಾಗುವಂತೆ ಮನವಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ತನಿಖಾ ಸಂಸ್ಥೆಯು ಅರಬಿಂದೋ ಫಾರ್ಮಾದ ವ್ಯವಸ್ಥಾಪಕ ನಿರ್ದೇಶಕ ಶರತ್ ರೆಡ್ಡಿ ಅವರ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಶೋಧಿಸಿ, ವಿಚಾರಣೆ ನಡೆಸಿತ್ತು, ಈ ವೇಳೆ ಅವರು ಅಕ್ರಮ ಆದಾಯ ವರ್ಗಾಯಿಸಲು ಸಹಾಯ ಮಾಡಿದ್ದರು ಎಂಬುದು ತಿಳಿದು ಬಂದಿದೆ ಈ ವಿಚಾರವಾಗಿ ಅಧಿಕಾರಿಗಳು ಶರತ್ ರೆಡ್ಡಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ :ಫಲಾನುಭವಿಗಳಿಗೆ ಆಹಾರ ಸಾಮಗ್ರಿ ವಿತರಣೆ, ಸಮರ್ಪಕ ನಿರ್ವಹಣೆ: ವೀಣಾ ವಿವೇಕಾನಂದ