ಬೆಂಗಳೂರು: ಸಂಪುಟ ಪುನಾರಚನೆಯ ವಿಚಾರದ ಬಗ್ಗೆ ದೆಹಲಿಗೆ ಹೋದ ನಂತರ ಸಭೆ ಮಾಡಿ ತಿಳಿಸುತ್ತೇವೆ ಎಂದು ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಅಮೇಲೆ ನೀವು ಬನ್ನಿ ಎಂದು ಹೇಳಿದ್ದಾರೆ. ಪುನಾರಚನೆಯೋ ಅಥವಾ ವಿಸ್ತರಣೆಯೋ ಎನ್ನುವುದು ದೆಹಲಿಯಲ್ಲಿ ತೀರ್ಮಾನವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಾಟೆ ವಿಚಾರವಾಗಿ ಎಲ್ಲರನ್ನೂ ಬಂಧನ ಮಾಡಿದ್ದೇವೆ. ಈ ಬಗ್ಗೆ ತನಿಖೆಯಾಗುತ್ತಿದೆ. ಇದರ ಹಿಂದೆ ಯಾರಿದ್ದಾರೆ, ಯಾವ ನಾಯಕರು ಇದ್ದಾರೆಂದು ತನಿಖೆಯಲ್ಲಿ ತಿಳಿಯಲಿದೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಿಎಸ್ಐ ವಿಚಾರದಲ್ಲಿ ಹಲವಾರು ದೂರುಗಳು ಬಂದಿತ್ತು. ತಕ್ಷಣ ಗೃಹ ಸಚಿವರು ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ನಾವೇ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಸಿಐಡಿಗೆ ಕೊಟ್ಟಿದ್ದೇವೆ. ಯಾರೇ ಇರಲಿ, ಯಾವ ಯಾವ ಸೆಂಟರ್ ನಲ್ಲಿ ಪರೀಕ್ಷೆಯಾಗಿ, ಪರೀಕ್ಷೆ ನಂತರ ಸುಪ್ರವೈಸರ್ ಲೆವಲ್ ನಲ್ಲಿ ಸಮಸ್ಯೆಯಾಗಿದ್ದರೆ ಸಮಗ್ರವಾಗಿ ತನಿಖೆ ಮಾಡಲು ಆದೇಶ ಕೊಟ್ಟಿದ್ದೇನೆ ಎಂದರು.
ಇದನ್ನೂ ಓದಿ:ಅಧಿಕಾರಿಗಳ ಜತೆ ಆರಗ ಜ್ಞಾನೇಂದ್ರ ಸಭೆ
ಬೇರೆ ಸರ್ಕಾರದ ಇದ್ದರೆ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದರು, ಆದರೆ ನಮ್ಮ ಗಮನಕ್ಕೆ ಬಂದ ತಕ್ಷಣ ಸಿಐಡಿಗೆ ಕೊಟ್ಟಿದ್ದೇವೆ. ಸಿಐಡಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಯಾರೇ ತಪಿತಸ್ಥರಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.