Advertisement

ಇನ್ನು ದಿಲ್ಲಿ-ವೈಷ್ಣೋದೇವಿ ಪ್ರಯಾಣಕ್ಕೆ ಕೇವಲ 8 ಗಂಟೆ ಸಾಕು!

10:19 AM Sep 30, 2019 | Team Udayavani |

ಹೊಸದಿಲ್ಲಿ: ವೈಷ್ಣೋದೇವಿ-ದಿಲ್ಲಿ ಮಧ್ಯೆ ದೇಶದಲ್ಲೇ ಅತಿ ವೇಗದ ರೈಲು ಟ್ರೈನ್‌ 18 ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌’ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಅ.5ರಿಂದ ರೈಲು ಯಾನ ಶುರುವಾಗಲಿದೆ.

Advertisement

ಇದಕ್ಕೆ ಪೂರಕವಾಗಿ ಐ.ಆರ್‌.ಸಿ.ಟಿ.ಸಿ. ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಅ.3ರಿಂದ ಟ್ರೈನ್‌ 18ಗೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಹಸಿರು ನಿಶಾನೆ ತೋರಲಿದ್ದಾರೆ. ದಿಲ್ಲಿ-ಕಟ್ರಾ ಮಧ್ಯೆ ರೈಲು ಸಂಚರಿಸಲಿದೆ. ವೈಷ್ಣೋದೇವಿಗೆ ಅತಿ ಹತ್ತಿರದ ರೈಲು ನಿಲ್ದಾಣ ಇದಾಗಿದೆ.

ಎಂಜಿನ್‌ ರಹಿತ, ಸೆಮಿ ಹೈ ಸ್ಪೀಡ್‌ ರೈಲು ಇದಾಗಿದ್ದು, ಇನ್ನು ಪ್ರಯಾಣಕ್ಕೆ ಕೇವಲ 8 ಗಂಟೆ ತೆಗೆದುಕೊಳ್ಳಲಿದೆ. ಸದ್ಯ ಈ ದೂರವನ್ನು ಕ್ರಮಿಸಲು ರೈಲು 12 ಗಂಟೆ ಅಥವಾ ಅದಕ್ಕೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದೆ.

ಈ ರೈಲು ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡಲು ಅನುಮತಿ ಇದ್ದರೂ, ಕಟ್ರಾ-ದಿಲ್ಲಿ ಮಧ್ಯೆ ಗರಿಷ್ಠ 130 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ. ಒಟ್ಟು 16 ಬೋಗಿಗಳನ್ನು ಹೊಂದಿರಲಿದ್ದು, ಇದರಲ್ಲಿ ಎರಡು ಎಕ್ಸಿಕ್ಯೂಟಿವ್‌ ಚೇರ್‌ ಕಾರ್‌ ಮತ್ತು 12 ಚೇರ್‌ ಕಾರ್‌ ಬೋಗಿಗಳನ್ನು ಹೊಂದಿರಲಿದೆ. ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಈ ರೈಲು ಈಗಾಗಲೇ ಜನಮೆಚ್ಚುಗೆ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next