Advertisement

ದೆಹಲಿ ಕರ್ನಾಟಕ ಸಂಘದ ವತಿಯಿಂದ  ತುಳು-ಕೊಂಕಣಿ ಸಂಭ್ರಮ

04:31 PM Jul 28, 2017 | Team Udayavani |

ಮುಂಬಯಿ: ಒಂದು ಭಾಷೆ, ಸಾಹಿತ್ಯ ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ. ಇವು ಹರಿವ ನೀರಿನಂತೆ ಚಲನಶೀಲವಾದುದು. ಈ ನೆಲೆಯಲ್ಲಿ ತುಳು-ಕೊಂಕಣಿ  ಭಾಷೆಗಳು ಕೂಡ ಸಾಗಿವೆ. ಹೊರನಾಡಿನಲ್ಲಿದ್ದುಕೊಂಡು ನಾವು ನಮ್ಮ ಮಾತೃ ಭಾಷೆಯ ಸೇವೆ ಮಾಡುವುದು ನಮ್ಮ ಕರ್ತವ್ಯ. ಯುವ ಬರಹಗಾರರನ್ನು ಪ್ರೋತ್ಸಾಹಿಸುವ, ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುವ ‘ತುಳು-ಕೊಂಕಣಿ ಸಂಭ್ರಮದಂತಹ ಕಾರ್ಯಕ್ರಮಗಳನ್ನು ಸಂಘಟಿಸುವ ಪ್ರಯತ್ನವನ್ನು ದೆಹಲಿ ಕರ್ನಾಟಕ ಸಂಘ ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ  ವಸಂತ ಶೆಟ್ಟಿ ಬೆಳ್ಳಾರೆ ಅವರು ನುಡಿದರು.

Advertisement

ದೆಹಲಿ ಕರ್ನಾಟಕ ಸಂಘದ ವತಿಯಿಂದ ಇತ್ತೀಚೆಗೆ ಸಂಘದ ಸಭಾಗೃಹದಲ್ಲಿ ನಡೆದ ತುಳು-ಕೊಂಕಣಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತ ಸರಕಾರದ ಕೃಷಿ ಸಚಿವಾಲಯದ ಉಪ ನಿರ್ದೇಶಕರಾದ ಪ್ರಸನ್ನ ಸಾಲ್ಯಾನ್‌ ಅವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಅರವಿಂದ ಬಿಜೈ ಅವರ ತುಳು ಸಿನಿಮಾ-ಒಂದು ಅಧ್ಯಯನ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ತುಳು ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ. ಕಲೆ ಹಾಗೂ ಮಾಧ್ಯಮವಾದ ಸಿನಿಮಾದ ಕುರಿತಾದ ಅಧ್ಯಯನ ಅಗತ್ಯವಾಗಿದೆ. ಇಂತಹ ಕಾರ್ಯವನ್ನು ದೆಹಲಿ ಕನ್ನಡ ಶಾಲೆಯ ಕನ್ನಡ ಶಿಕ್ಷಕರಾದ  ಅರವಿಂದ ಬಿಜೈ ಅವರು  ಮಾಡಿದ್ದಾರೆ. ಯುವ ಜನತೆಯಿಂದ ನಮ್ಮಕಲೆ, ಸಂಸ್ಕೃತಿ, ಪರಂಪರೆಯ ಕುರಿತಾಗಿ ಇನ್ನಷ್ಟು ಅಧ್ಯಯನಾತ್ಮಕ ಬರಹಗಳು ಪ್ರಕಟವಾಗಲಿ ಎಂದು ನುಡಿದು ಶುಭ ಹಾರೈಸಿದರು.

ಕರ್ನಾಟಕ  ವಿಶ್ವ ವಿದ್ಯಾಲಯದ ಕಾಲೇಜೇಟ್‌ ಎಜುಕೇಶನ್‌, ದಾಂಡೇಲಿ ಇದರ ನಿವೃತ್ತ ಪ್ರಾಂಶುಪಾಲ ಎ. ಕೆ. ಶಣಿÌ, ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ನಿರ್ದೇಶಕಿ ಶಾರದಾ ಮಣಿಶೇಖರ್‌ ಅತಿಥಿಯಾಗಿ ಭಾಗವಹಿಸಿದ್ದರು. ಕೃತಿಕಾರರಾದ  ಅರವಿಂದ ಬಿಜೈ ಅವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಮಿಥುನ್‌ ಶೆಟ್ಟಿ ನೇತೃತ್ವದಲ್ಲಿ  ಗ್ಲಾಡಿಯೇಟರ್ ಕಾಪು ತಂಡದಿಂದ ಅವಿನಾಶ್‌ ಅವರ ನಿರ್ದೇಶನದಲ್ಲಿ ತುಳು-ಕೊಂಕಣಿ ಸಂಸ್ಕೃತಿ ಬಿಂಬಿತವಾದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನೆರೆದವರ ಮನ ಸೆಳೆಯಿತು. ತುಳು ರಸಪ್ರಶ್ನೆ ಹಾಗೂ ಇನ್ನಿತರ ಆಕರ್ಷಕ ಸ್ಪರ್ಧೆಗಳು ಸಭಿಕರನ್ನು ರಂಜಿಸಿದವು. ಕೆನರಾ ಕಲ್ಚರಲ್‌ ಸೊಸೈಟಿಯ ಸದಸ್ಯರು ಕೊಂಕಣಿ ಹಾಡುಗಳನ್ನು ಜೊತೆಗೆ ಸ್ಥಳೀಯ ಕಲಾವಿದರಾದ ಪೂಜಾ ಪಿ. ರಾವ್‌, ಅರವಿಂದ ಬಿಜೈ  ಹಾಗೂ ಶ್ರೇಯಸ್‌ ಅವರು ತುಳು ಚಿತ್ರಗೀತೆಗಳನ್ನು  ಪ್ರಸ್ತುತಪಡಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಖಾರಾಮ ಉಪ್ಪೂರು ಹಾಗೂ ಪೂಜಾ ಪಿ. ರಾವ್‌ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next