Advertisement

ದೆಹಲಿ ಕರ್ನಾಟಕ ಸಂಘ: ಪದ್ಮಶ್ರೀ ಡಾ|ದೊಡ್ಡರಂಗೇ ಗೌಡರಿಗೆ ಅಭಿನಂದನೆ

12:01 PM Apr 04, 2018 | Team Udayavani |

ಮುಂಬಯಿ: ಬದುಕು ಬಹಳ ದೊಡ್ಡದು. ಪ್ರಶಸ್ತಿಗಳಿಗಿಂತ ಬದುಕು ದೊಡ್ಡದು ಎಂದು ನಾನು ಭಾವಿಸಿದವನು. ಬದುಕಿನಲ್ಲಿ ನಾವು ಏನು ಸಾಧನೆ ಮಾಡಬೇಕಾದರೂ ಕೂಡ ನಮ್ಮ ಮಹತ್ವಾಕಾಂಕ್ಷೆಯನ್ನು ನಾವು ಮರೆಯಬಾರದು. ನಮ್ಮ ಪ್ರಾಮಾಣಿಕತೆಯನ್ನು ಬಿಡ ಬಾರದು. ಒಂದು ರೀತಿಯಲ್ಲಿ ಒಬ್ಬ ಬರಹಗಾರನಿಗೆ ಅತ್ಯುತ್ತಮ ಕೃತಿಗಳನ್ನು ಬರೆಯುವುದೇ ಅಥವಾ ತನ್ನ ಎಲ್ಲ ಅನುಭವಗಳನ್ನು ಕೂಡಾ ಅದನ್ನು ಅಭಿವ್ಯಕ್ತಿರೂಪ ಕೊಟ್ಟು ಅದನ್ನು ಸಾಹಿತ್ಯ ಕೃತಿಗಳನ್ನಾಗಿ ಮಾರ್ಪಡಿಸತಕ್ಕಂಥದ್ದೇ ಅವನ ಮಹತ್ವಾಕಾಂಕ್ಷೆ. ಅದು ಅವನ ಕಾಯಕ. ನನಗೆ ಬರವಣಿಗೆ ಅನ್ನುವುದು ಒಂದು ತಪಸ್ಸು. 1960ನೇ ಸಾಲಿನಲ್ಲಿ ಬರೆಯಲು ಪ್ರಾರಂಭಿಸಿದೆ. 60ರ ಸುಮಾರಿಗೆ ನನ್ನ ಮೂರು ಕವಿತೆಗಳು ಆಕಾಶವಾಣಿಯಲ್ಲಿ ಪ್ರಸಾರವಾದವು. ಆಗಿನ ಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟಗೊಂಡವು. ಬರೆಯುತ್ತಾ ಹೋದೆ, ಬೆಳೆಯುತ್ತಾ ಹೋದೆ, ಕನ್ನಡವನ್ನೇ ನಿಚ್ಚಳವಾಗಿ ಬಳಸುತ್ತಾ ಹೋದೆ. ನನ್ನ ಬದುಕಿನ ಎಳೆ ಎಳೆಯು ಕೂಡ  ನನ್ನ ಬರವಣಿಗೆ ಯಲ್ಲಿದೆ. ಲೇಖಕ ತನ್ನ ಬದುಕನ್ನಷ್ಟೇ ಅನಾವರಣ ಮಾಡಿದರೆ ಸಾಲದು, ಸುತ್ತಣ ಸಮಾಜವನ್ನು ಕೂಡಾ ಅವನು ಗಂಭೀರವಾಗಿ ಗಮನಿಸಬೇಕು. ಸಮಾಜದಲ್ಲಿ ಇರತಕ್ಕಂತಹ ಎಲ್ಲ ಓರೆಕೋರೆಗಳನ್ನು ಗಮನಿಸಬೇಕು. ಸಾಹಿತಿ ಸಮಾಜಮುಖೀ ಆಗಿರಬೇಕು ಎಂದು ಪದ್ಮಶ್ರೀ ಪುರಸ್ಕೃತ ಡಾ| ದೊಡ್ಡರಂಗೇ ಗೌಡ ಅವರು ನುಡಿದರು.

Advertisement

ಎ. 1ರಂದು ದೆಹಲಿ ಕರ್ನಾಟಕ ಸಂಘದ ವತಿಯಿಂದ ಸಂಘದ ಸಭಾಗೃಹದಲ್ಲಿ ನಡೆದ ಸಮಾ ರಂಭದಲ್ಲಿ ಅಭಿನಂದನ ಸಮ್ಮಾನ ಸ್ವೀಕರಿಸಿ ಮಾತನಾಡಿದ ಇವರು ಇವತ್ತು ದೆಹಲಿ ಕರ್ನಾಟಕ ಸಂಘ ದೊಡ್ಡ ಶಕ್ತಿಯಾಗಿ ಬೆಳೆದಿದೆ’.  ಇಲ್ಲಿಗೆ ಬಾರದೇ ಇರತಕ್ಕಂತಹ ಕನ್ನಡಿಗ ಇಲ್ಲವೇ ಇಲ್ಲ. ಕನ್ನಡಿಗ ಇಲ್ಲಿ ಬರಲಿಲ್ಲ ಅಂದರೆ ಅವನಿಗೆ ನಷ್ಟ ಎಂದು ನುಡಿದರು.

 ರಂಗ ನಿರ್ದೇಶಕ ಎಂ. ಎಸ್‌. ಸತ್ಯು ಅವರು ಮಾತನಾಡುತ್ತ,  ನನ್ನ ಮಾಧ್ಯಮ ನಾಟಕ ಮತ್ತು ಸಿನೆಮಾ. ಡಾ|  ದೊಡ್ಡರಂಗೇ ಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಬಹಳ ಸಂತೋಷ ತಂದಿದೆ ಎಂದರು.

ಡಾ| ದೊಡ್ಡರಂಗೇ ಗೌಡ ಅವರನ್ನು ದೆಹಲಿ ಕರ್ನಾಟಕ ಸಂಘದ ಪರವಾಗಿ ಶಾಲು ಹೊದೆಸಿ, ಫಲ ಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಅಭಿನಂದಿಸಲಾಯಿತು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ, ಅಬ್ಬಕ ಕುರಿತಾಗಿ ಹಿಂದಿಯಲ್ಲಿ ಮತ್ತಿತರ ಭಾಷೆಯಲ್ಲಿ ನಾಟಕಗಳು ಆಗಬೇಕು ಎಂದರು.

ಇದೇ ಸಂದರ್ಭದಲ್ಲಿ ಪ್ರಸ್ತುತ ಗೊಂಡ ಎಂ. ಎಸ್‌. ಸತ್ಯು ನಿರ್ದೇ ಶನದ ಗುಲ್‌ ಏ ಬಕಾವಲಿ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮ ವನ್ನು ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ ಅವರು ನಿರೂಪಿಸಿದರು. ಡಾ| ಅಹಲ್ಯಾ ಚಿಂತಾಮಣಿ, ಹಿರಿಯ ಕಲಾವಿದ ಭೀಮರಾವ್‌ ಮುರಗೋಡ ಅವರು ಉಪಸ್ಥಿತರಿದ್ದರು. 

Advertisement

ಸಾಹಿತ್ಯಾ ಭಿಮಾನಿಗಳು, ತುಳು- ಕನ್ನಡಿಗರು ದೆಹಲಿ ಕರ್ನಾಟಕ ಸಂಘದ ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next